ತುಂಬಿದ ತೊಟ್ಟಿ, ಇಂಗಿದ ಬಾಯಾರಿಕೆ

7

ತುಂಬಿದ ತೊಟ್ಟಿ, ಇಂಗಿದ ಬಾಯಾರಿಕೆ

Published:
Updated:
Prajavani

ಬೆಂಗಳೂರು: ನಗರದ ಹೃದಯ ಭಾಗ ಮೆಜೆಸ್ಟಿಕ್‌ನಲ್ಲಿರುವ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬಿಎಂಟಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ.

ನಿಲ್ದಾಣದಲ್ಲಿ ಕೆಲ ದಿನಗಳಿಂದ ನೀರಿನ ತೊಟ್ಟಿಗಳು ಸ್ಥಗಿತಗೊಂಡು ದೂಳು ಹಿಡಿದು ಮೂಲೆ ಸೇರಿದ್ದವು. ಸದ್ಯ ನೀರಿನ ಘಟಕಗಳನ್ನು ದುರಸ್ತಿ ಮಾಡಿಸಿ ನಲ್ಲಿಗಳನ್ನು ಅಳವಡಿಸಿದೆ. ಲೋಟಗಳನ್ನು ಸಹ ಇಟ್ಟಿದೆ.

ಪ್ರಯಾಣಿಕರು ಇಲ್ಲಿಯೇ ನೀರು ಕುಡಿಯುತ್ತಿದ್ದಾರೆ.  ಬಸ್‌ ಚಾಲಕರು ಮತ್ತು ನಿರ್ವಾಹಕರು ನೀರನ್ನು ಬಾಟಲಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ.

ಈ ಕುರಿತು ಪ್ರಜಾವಾಣಿ ಮಂಗಳವಾರ ‘ನೀರು ಆರಿದ ತೊಟ್ಟಿ, ಬಾಯಾರಿದ ಪ್ರಯಾಣಿಕರು’ ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿಯನ್ನು ಪ್ರಕಟಿಸಿತ್ತು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !