ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲಿವೇಟೆಡ್‌ ಕಾರಿಡಾರ್‌: ಜನ ಹೇಳುವುದೇನು?

Last Updated 3 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು:ನಗರದಲ್ಲಿ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. 92 ಕಿ.ಮೀ ಉದ್ದದ ಕಾರಿಡಾರ್‌ ನಿರ್ಮಾಣಕ್ಕೆ ₹ 25 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ಯೋಜನೆ ನಿಜಕ್ಕೂ ಅಗತ್ಯವಿದೆಯೇ? ಈ ಯೋಜನೆಯಿಂದ ನಗರದ ಸಂಚಾರ ದಟ್ಟಣೆ ಸಮಸ್ಯೆ ನೀಗಲಿದೆಯೇ?ಈ ಬಗ್ಗೆ ಅಭಿಪ್ರಾಯವನ್ನು ಜನರು ಹಂಚಿಕೊಂಡಿದ್ದಾರೆ.

‘ಕೈಗಾರಿಕೆಗಳನ್ನು ಸ್ಥಳಾಂತರಿಸಲಿ’

ಎಲಿವೇಟೆಡ್ ಕಾರಿಡಾರ್ ಯೋಜನೆಯಿಂದ ತಾತ್ಕಾಲಿಕ ಪರಿಹಾರವಷ್ಟೇ ಸಿಗುತ್ತದೆ.ನಗರಕ್ಕೆ ಉದ್ಯೋಗ ಅರಸಿ ಬರುವವರ ಸಂಖ್ಯೆಯಲ್ಲಿ ಹೆಚ್ಚಳವಾದರೆ ಮತ್ತೆ ಸಂಚಾರ ದಟ್ಟಣೆ ಸಮಸ್ಯೆ ತಲೆದೋರಲಿದೆ. ದೊಡ್ಡ ಕಂಪನಿಗಳನ್ನು ಹುಬ್ಬಳ್ಳಿ, ಕಲಬುರ್ಗಿಯಂತಹ ನಗರಗಳಿಗೆ ಸ್ಥಳಾಂತರಿಸುವುದೇ ಸಮಸ್ಯೆಗೆ ಉತ್ತಮ ಪರಿಹಾರ.

–ಅಮರೇಶ ರಾಯ, ಹೆಬ್ಬಾಳ

‘ಯೋಜನೆಯ ಅಗತ್ಯವಿದೆ’

ವಾಹನ ದಟ್ಟಣೆಯಿಂದ ನಲುಗುತ್ತಿರುವ ನಗರಕ್ಕೆಎಲಿವೇಟೆಡ್ ಕಾರಿಡಾರ್‌ ಯೋಜನೆ ಅಗತ್ಯವಿದೆ. ಇದರ ಜೊತೆಗೆ ನಗರದ ಹೊರವರ್ತುಲರಸ್ತೆಗಳ ಅಭಿವೃದ್ಧಿ, ಮೆಟ್ರೊ ವಿಸ್ತರಣೆ ಹಾಗೂ ಬಹುಮಾದರಿ ಸಂಪರ್ಕಜಾಲವ್ಯವಸ್ಥೆಯನ್ನು ಮಾಡಬೇಕು. ಆಗ ಮಾತ್ರ ವಾಹನ ದಟ್ಟಣೆ ಸಮಸ್ಯೆ ಬಗೆಹರಿಯಲಿದೆ.

–ಕೃಷ್ಣಮೂರ್ತಿ ಕೆ.ಎಸ್., ಚನ್ನಸಂದ್ರ

‘ತಜ್ಞರ ಸಲಹೆಗೆ ಬೆಲೆ ಕೊಡಿ’

ಎಲಿವೇಟೆಡ್ ಕಾರಿಡಾರ್ ನಿರ್ಮಾಣದಿಂದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗೆಹರಿಯುವುದಿಲ್ಲ. ಅದಕ್ಕೆ ಮಾಡುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿಮೆಟ್ರೊ ಅಭಿವೃದ್ಧಿಪಡಿಸಿ ವಾಹನ ದಟ್ಟಣೆ ಕಡಿಮೆ ಮಾಡಬಹುದು ಎನ್ನುವ ತಜ್ಞರ ಸಲಹೆಗೆ ಬೆಲೆ ಕೊಡಿ. ಆಗ ಜನರ ತೆರಿಗೆ ಹಣದ ದುರುಪಯೋಗ ತಪ್ಪುತ್ತದೆ.

–ರತ್ನಶ್ರೀ ಶ್ರೀಧರ್, ಚಿಕ್ಕಲ್ಲಸಂದ್ರ

‘ಯೋಜನೆ ಸ್ವಾಗತಾರ್ಹವಾದದ್ದು’

ಬೆಳೆಯುತ್ತಿರುವ ಬೆಂಗಳೂರಿನಲ್ಲಿಸಾರ್ವಜನಿಕರು ದುಬಾರಿ ಬೆಲೆಯಲ್ಲಿ ತಮ್ಮ ವಾಹನಗಳಿಗೆ ಇಂಧನ ಪೂರೈಸುವುದರೊಂದಿಗೆ ಬದುಕನ್ನು ಕಟ್ಟಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಸುಗಮ ಸಂಚಾರಕ್ಕೆ ಎಲಿವೇಟೆಡ್‌ ಕಾರಿಡಾರ್ ಯೋಜನೆ ಸ್ವಾಗತಾರ್ಹ. ಇದು ಸಾಧ್ಯವಾದಷ್ಟು ಮಟ್ಟಿಗೆ ಉಸಿರು ಕಟ್ಟಿಸುವ ಸಂಚಾರ ದಟ್ಟಣೆಯಿಂದ ಮುಕ್ತಿ ನೀಡುತ್ತದೆ.

–ನಾಗರಾಜ್ ಗರಗ್,ರಾಜಾಜಿನಗರ

‘ನಿಯಮಗಳನ್ನು ಪಾಲಿಸಲಿ’

ಎಲಿವೇಟೆಡ್ ಕಾರಿಡಾರ್‌ ನಿರ್ಮಾಣದಿಂದ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಯುತ್ತದೆ ಎನ್ನುವುದು ಸುಳ್ಳು. ಇದಕ್ಕೆ ಹೆಬ್ಬಾಳಮೇಲ್ಸೇತುವೆಯನ್ನು ಸಂಪರ್ಕಿಸುವಕಾರಿಡಾರ್ ಜ್ವಲಂತ ಉದಾಹರಣೆ.ಇದರ ಬದಲು ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ಸಾರ್ವಜನಿಕರು ಸಹ ಸಂಚಾರ ನಿಯಮಗಳನ್ನು ಚಾಚೂ ತಪ್ಪದೇಪಾಲಿಸಬೇಕು.

–ವಿಜಯ್ ಚಂದಾಪುರ, ವಿದ್ಯಾರಣ್ಯಪುರ

‘ದೊಡ್ಡ ಖರ್ಚು ಸಮಂಜಸವಲ್ಲ’

ಎಲಿವೇಟೆಡ್ ಕಾರಿಡಾರ್ ಯೋಜನೆಗಾಗಿ ಸರ್ಕಾರ ₹25 ಸಾವಿರ ಕೋಟಿ ಖರ್ಚು ಮಾಡುವುದು ಸಮಂಜಸವಲ್ಲ. ಅಲ್ಲದೆ ಈ ಯೋಜನೆಯಿಂದಾಗಿ ಸಾವಿರಾರು ಮರಗಳನ್ನು ನಾಶ ಮಾಡಲಾಗುತ್ತದೆ. ಅದರ ಬದಲಿಗೆ ಮೆಟ್ರೊವನ್ನು ವಿಸ್ತರಿಸಿ ಹೆಚ್ಚುವರಿ ಬೋಗಿಗಳನ್ನು ಜೋಡಿಸಿದರೆ ದಟ್ಟಣೆ ಕಡಿಮೆ ಮಾಡಬಹುದು.

–ಆಶಾಬಾಯಿ ಆರ್., ಬಿಇಎಲ್ ಕಾಲೊನಿ

***

ನಗರದಲ್ಲಿ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. 92 ಕಿ.ಮೀ ಉದ್ದದ ಕಾರಿಡಾರ್‌ ನಿರ್ಮಾಣಕ್ಕೆ ₹ 25 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ಯೋಜನೆ ನಿಜಕ್ಕೂ ಅಗತ್ಯವಿದೆಯೇ? ಈ ಯೋಜನೆಯಿಂದ ನಗರದ ಸಂಚಾರ ದಟ್ಟಣೆ ಸಮಸ್ಯೆ ನೀಗಲಿದೆಯೇ?

ನೀವೂ ಕೂಡಾ ಈ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು.
ನಿಮ್ಮ ಹೆಸರು ವಿಳಾಸ ಹಾಗೂ ಭಾವಚಿತ್ರವನ್ನು ‘ಪ್ರಜಾವಾಣಿ’ಗೆ ಕಳುಹಿಸಿಕೊಡಿ. ವಾಟ್ಸಪ್‌: 9513322930

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT