ಸಚಿವ ನಾಯ್ಕ್‌ ವಿರುದ್ಧ ದೂರು ದಾಖಲು

ಭಾನುವಾರ, ಏಪ್ರಿಲ್ 21, 2019
32 °C
ಬಿಜೆಪಿಯ ನಾಲ್ವರು ಕಾರ್ಯಕರ್ತರ ಬಂಧನ

ಸಚಿವ ನಾಯ್ಕ್‌ ವಿರುದ್ಧ ದೂರು ದಾಖಲು

Published:
Updated:

ವಾಡಿ (ಕಲಬುರ್ಗಿ ಜಿಲ್ಲೆ): ಚಿತ್ತಾಪುರ ತಾಲ್ಲೂಕು ಕುಂಬಾರಹಳ್ಳಿಯಲ್ಲಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್‌ ಕಾರಿಗೆ ಬುಧವಾರ ಕಲ್ಲು ತೂರಿ, ಅದರಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಜೆಪಿಯ ನಾಲ್ವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

‘ಸಚಿವರು ಪ್ರಚಾರಕ್ಕೆ ತೆರಳಿದ್ದಾಗ ಕಾರು ಅಡ್ಡಗಟ್ಟಿ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಲಾಯಿತು’ ಎಂದು ಪೇಠಶಿರೂರ ತಾಲ್ಲೂಕು ಪಂಚಾಯಿತಿ ಸದಸ್ಯ ನಾಮದೇವ ರಾಠೋಡ ಅವರು, ಬಿಜೆಪಿಯ ವಾಲ್ಮೀಕ್‌ ರಾಠೋಡ ಹಾಗೂ ಇತರರ ವಿರುದ್ಧ ದೂರು ನೀಡಿದ್ದರು.

‘ಹೆಂಡ ಹಂಚಲು ಬಂದಿದ್ದರು ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಮತಹಾಕಿ ಎಂದು ಬಲವಂತ ಮಾಡುತ್ತಿದ್ದರು’ ಎಂದು ಆರೋಪಿಸಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್‌ ಹಾಗೂ ಕಾಂಗ್ರೆಸ್‌ ಪಕ್ಷದ ಹಲವರ ವಿರುದ್ಧ ಬಿಜೆಪಿ  ಕಾರ್ಯಕರ್ತ ವಸಂತ ಶಂಕರ ಚವ್ಹಾಣ ಪ್ರತಿ ದೂರು ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !