ಕ್ಯಾನ್ಸರ್ ಪೀಡಿತರಿಗೆ ಸಂಸ್ಥೆಯಿಂದ ಚಿಕಿತ್ಸೆ ವೆಚ್ಚ

7

ಕ್ಯಾನ್ಸರ್ ಪೀಡಿತರಿಗೆ ಸಂಸ್ಥೆಯಿಂದ ಚಿಕಿತ್ಸೆ ವೆಚ್ಚ

Published:
Updated:
Deccan Herald

ಬೆಂಗಳೂರು: ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಚಿಕ್ಕಬಾಣಾವರ ಗ್ರಾಮದ ಯಶಸ್ ವಿದ್ಯಾಕೇಂದ್ರದಲ್ಲಿ ಆದ್ಯ ಸರ್ವೀಸ್ ಮತ್ತು ವೆಲೆಫೇರ್ ಟ್ರಸ್ಟ್ ವತಿಯಿಂದ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. 

ಗಾಣಿಗಾರಹಳ್ಳಿ, ಕೆಂಪಾಪುರ, ಕೆರೆಗುಡ್ಡಹಳ್ಳಿ, ಸೋಲದೇವನಹಳ್ಳಿ, ಲಕ್ಷ್ಮೀಪುರ, ಕಬ್ಬೆಪಾಳ್ಯ ಗ್ರಾಮಸ್ಥರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. 1,470 ಜನರು ಭಾಗವಹಿಸಿದ್ದರು. ಮಧುಮೇಹ, ರಕ್ತದ ಒತ್ತಡ ಪರೀಕ್ಷಿಸಲಾಯಿತು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಯಿತು. 

ಶಿಬಿರವನ್ನು ಉದ್ಘಾಟಿಸಿದ ದಾಸರಹಳ್ಳಿ ಶಾಸಕ ಆರ್.ಮಂಜುನಾಥ್, ‘ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗದ ಎರಡನೇಯ ಆರೋಗ್ಯ ಶಿಬಿರ ಇದಾಗಿದೆ. ತೀರ ಆರ್ಥಿಕವಾಗಿ ಹಿಂದುಳಿದವರಿಗಾಗಿ ಶಿಬಿರ ಆಯೋಜಿಸಲಾಗಿದೆ ಎಂದರು.   
ಶಿಬಿರದಲ್ಲಿ ಏಳು ಬಡ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಂಡು ಬಂದಿದೆ. ಈ ಚಿಕಿತ್ಸೆಯ ಶೇ 60ರಷ್ಟು ವೆಚ್ಚ ಭರಿಸುವುದಾಗಿ ಶಾಸಕರು ಹಾಗೂ ಲಯನ್ಸ್‌ ಕ್ಲಬ್‌ ಪದಾಧಿಕಾರಿಗಳು ಭರವಸೆ ನೀಡಿದರು. 

ಮ್ಯಾನೇಜಿಂಗ್ ಟ್ರಸ್ಟಿ ಕಿರಣ್ ಕುಮಾರ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !