ಭಾನುವಾರ, ನವೆಂಬರ್ 17, 2019
27 °C

ರಸ್ತೆಗೆ ಹರಿದ ಕೊಳಚೆ ನೀರು: ಸಾರ್ವಜನಿಕರ ಪರದಾಟ

Published:
Updated:
Prajavani

ಹೊಸಕೋಟೆ: ಇಲ್ಲಿನ ಹೆದ್ದಾರಿಯ ಪೊಲೀಸ್ ಠಾಣೆ ಸರ್ವಿಸ್ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. 

ದಟ್ಟಣೆ ಹೆಚ್ಚಿರುವ ಈ ರಸ್ತೆಯಲ್ಲಿ ಪಾದಚಾರಿ ಮಾರ್ಗ ಇಲ್ಲ. ರಸ್ತೆ ದಾಟುವಾಗ ಅಪಾಯ ಕಟ್ಟಿಟ್ಟದ್ದು. ರಸ್ತೆ ಬದಿಸಾಕಷ್ಟು ಅಂಗಡಿಗಳು, ಒಂದು ದೇವಾಲಯ ಮತ್ತು ಚರ್ಚ್ ಇವೆ. ಜನರು ಕೊಳಚೆ ನೀರು ದಾಟಿ ಹೋಗಲು ಪರದಾಡಬೇಕಿದೆ. ಬೀದಿ ದೀಪ ಇಲ್ಲದ ಈ ರಸ್ತೆಯಲ್ಲಿ ಕತ್ತಲಲ್ಲಿ ಪಾದಚಾರಿಗಳು ಜಾರಿ ಬೀಳುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಅಲ್ಲಿನ ಅಂಗಡಿ ಮಾಲೀಕ ರಾಹುಲ್. ಮಳೆ ಬಂದಾಗಲಂತೂ ಕೊಳಚೆ ನೀರು ಶಿವಾ ಗಾರ್ಡನ್ ಬಳಿಯ ವಸತಿ ಪ್ರದೇಶದಲ್ಲಿನ ಅನೇಕ ಮನೆಗಳಿಗೆ ನುಗ್ಗುತ್ತಿರುವುದು ಅಲ್ಲಿನ ವಾಸಿಗಳ ನಿದ್ದೆಗೆಡಿಸಿದೆ.

ರಸ್ತೆ ಬದಿ ಚರಂಡಿ ನಿರ್ಮಾಣ ಮಾಡದೇ ಇರುವುದು ಸಮಸ್ಯೆಗೆ ಕಾರಣವಾಗಿದ್ದು ಈ ಬಗ್ಗೆ ನಗರ ಸಭೆಯವರಿಗೆ, ಹೆದ್ದಾರಿಗೆ ಸಂಬಂಧಿಸಿದವರಿಗೆ ಹಲವು ಸಲ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ನಿವಾಸಿ ಮಂಜುಳಾ ಲೋಕೇಶ್.

ಪ್ರತಿಕ್ರಿಯಿಸಿ (+)