ಶನಿವಾರ, ಸೆಪ್ಟೆಂಬರ್ 25, 2021
22 °C

ಅವಳಿ ಮಕ್ಕಳಿಗೆ ಜನ್ಮ ನೀಡಿದ ಇರೋಮ್ ಶರ್ಮಿಳಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉಕ್ಕಿನ ಮಹಿಳೆ ಎಂದೇ ಜನಪ್ರಿಯವಾಗಿರುವ, ಮಣಿಪುರದ ಮಾನವಹಕ್ಕು ಹೋರಾಟಗಾರ್ತಿ ಇರೋಮ್ ಚಾನು ಶರ್ಮಿಳಾ ವಿಶ್ವ ತಾಯಂದಿರ ದಿನವಾದ ಭಾನುವಾರ ನಗರದ ಮಲ್ಲೇಶ್ವರದ ಕ್ಲೌಡ್‌ನೈನ್‌ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. 

‘ಇರೋಮ್ ಅವರು ಗರ್ಭಿಣಿ ಆದಾಗಿನಿಂದಲೂ ಪತಿಯೊಂದಿಗೆ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಅವರ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದೆವು. ಅವರು ತಾಯಂದಿರ ದಿನದಂದೇ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದು ವಿಶೇಷ. ಮಕ್ಕಳು ತಲಾ 2.14 ಕೆ.ಜಿ. ತೂಕ ಹೊಂದಿದ್ದು, ಆರೋಗ್ಯದಿಂದ್ದಾರೆ’ ಎಂದು ಸ್ತ್ರೀರೋಗ ತಜ್ಞೆ ಡಾ. ಶ್ರೀಪ್ರದಾ ವೀಣೇಕರ್ ತಿಳಿಸಿದರು. 

47 ವರ್ಷದ ಇರೋಮ್, ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯ ವಿರುದ್ಧ 16 ವರ್ಷ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಉಪವಾಸ ಕೊನೆಗೊಳಿಸಿದ ಬಳಿಕ 2017ರಲ್ಲಿ ಬಹುಕಾಲದ ಗೆಳೆಯ ಹಾಗೂ ಬ್ರಿಟಿಷ್ ಪ್ರಜೆ ಡೆಸ್ಮೆಂಡ್‌ ಕುಟಿನ್ಹೊ ಅವರನ್ನು ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು