ರವಿಕೃಷ್ಣಾ ರೆಡ್ಡಿ ಹೊಸ ಪಕ್ಷ

7
‘ಕರ್ನಾಟಕ ಜನತಾ ರಂಗ’ ನೋಂದಣಿಗೆ ಸಿದ್ಧತೆ

ರವಿಕೃಷ್ಣಾ ರೆಡ್ಡಿ ಹೊಸ ಪಕ್ಷ

Published:
Updated:
Prajavani

ಬೆಂಗಳೂರು: ‘ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮಾಯವಾಗಿರುವುದನ್ನು ಗಮನಿಸಿ ಪರ್ಯಾಯ ರಾಜಕಾರಣಕ್ಕಾಗಿ ಕರ್ನಾಟಕ ಜನತಾ ರಂಗ ಎನ್ನುವ ಪಕ್ಷವನ್ನು ಕಟ್ಟುತ್ತಿದ್ದೇವೆ’ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಸೋಮವಾರ ತಿಳಿಸಿದರು.

‘ಸಮಾನ ಮನಸ್ಕರು ಸೇರಿ ಚರ್ಚಿಸಿ, ರಾಜ್ಯದ ಅಸ್ಮಿತೆ ಪ್ರತಿಪಾದಿಸುವ ಪ್ರಾಮಾಣಿಕ ರಾಜಕೀಯ ಪಕ್ಷವನ್ನು ಕಟ್ಟಲು ತೀರ್ಮಾನಿಸಿದ್ದೇವೆ. ‘ಕರ್ನಾಟಕ ಜನತಾ ರಂಗ’ ಹೆಸರಿನಲ್ಲಿ ಪಕ್ಷ ನೋಂದಣಿಗಾಗಿ ಈಗಾಗಲೇ ಕೇಂದ್ರ ಚುನಾವಣಾ ಆಯೋಗಕ್ಕೆ ದಾಖಲೆ ಸಲ್ಲಿಸಿದ್ದೇವೆ. ಇನ್ನು ಎರಡು ತಿಂಗಳಲ್ಲಿ ಪಕ್ಷಕ್ಕೆ ಮಾನ್ಯತೆ ಸಿಗುವ ಭರವಸೆ ಇದೆ’ ಎಂದರು.

‘ಪಕ್ಷದ ನೋಂದಣಿ ಮತ್ತು ಸಂಘಟನೆಯ ದೃಷ್ಟಿಯಿಂದ ಎಸ್‌.ಎಚ್‌.ಲಿಂಗೇಗೌಡರನ್ನು ಉಪಾಧ್ಯಕ್ಷರನ್ನಾಗಿ, ಸಿ.ಎನ್‌.ದೀಪಕ್‌ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ, ರಘುಪತಿ ಭಟ್‌ ಅವರನ್ನು ಜಂಟಿ ಕಾರ್ಯದರ್ಶಿಯನ್ನಾಗಿ ಮತ್ತು ಹದಿನಾಲ್ಕು ಜನರನ್ನು ಕೇಂದ್ರ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ’ ಎಂದು ಹೇಳಿದರು.

‘ಪಕ್ಷದಿಂದ ಸ್ಪರ್ಧಿಸುವವರಿಗೆ ಚುನಾವಣೆಗೆ ಸಾಲ ಮಾಡಬಾರದು, ಜಮೀನು ಮಾರಾಟ ಮಾಡಬಾರದು ಎನ್ನುವ ಷರತ್ತುಗಳನ್ನು ವಿಧಿಸಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 12

  Happy
 • 3

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !