ನಾಳೆ ‘ಭಾರತ ಶಾಶ್ವತ್‌ ಆವಾಜ್‌’ ಬಿಡುಗಡೆ

ಗುರುವಾರ , ಏಪ್ರಿಲ್ 25, 2019
31 °C

ನಾಳೆ ‘ಭಾರತ ಶಾಶ್ವತ್‌ ಆವಾಜ್‌’ ಬಿಡುಗಡೆ

Published:
Updated:

ಬೆಂಗಳೂರು: ‘ನೇಪಾಳಿ ಭಾಷೆಗೆ ತರ್ಜುಮೆಗೊಂಡ ಕನ್ನಡದ 51 ಕವಿಗಳ ಕವನಗಳ ‘ಭಾರತ ಶಾಶ್ವತ್‌ ಆವಾಜ್‌’ ಸಂಕಲನ ಏ.11ರಂದು ಕಠ್ಮಂಡುವಿನಲ್ಲಿ ಬಿಡುಗಡೆಗೊಳ್ಳಲಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‌

‘ನೇಪಾಳದ ಉಪರಾಷ್ಟ್ರಪತಿ ನಂದ ಬಹದ್ದೂರ್‌ ಪುನ್ ಕವನ ಸಂಕಲನವನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.

‘ಕನ್ನಡದ 50ಕ್ಕೂ ಹೆಚ್ಚು ಕವಿ ಗಳ ಒಂದೊಂದು ಕವನವನ್ನು ನೇಪಾಳಿ ಭಾಷೆಗೆ ಹಾಗೂ ನೇಪಾಳಿ ಕವನಗಳನ್ನು ಕನ್ನಡಕ್ಕೆ ಅನುವಾದಿಸುವ ಸಂಬಂಧ ನೇಪಾಳ್ ಕಲಾ ಡಾಟ್‌ ಕಾಂ ಪ್ರತಿಷ್ಠಾನದೊಂದಿಗೆ ಒಪ್ಪಂದವಾಗಿತ್ತು. ಅದರಂತೆ ಈಗ ಕನ್ನಡ ಕವನಗಳನ್ನು ಆಂಗ್ಲ ಭಾಷೆಯಿಂದ ನೇಪಾಳಿ ಭಾಷೆಗೆ ಅನುವಾದ ಮಾಡಿ, ಸಂಕಲನವನ್ನು ಪ್ರಕಟಿಸಲಾಗಿದೆ. ಅದು ಗುರುವಾರ ಬಿಡುಗಡೆಯಾಗಲಿದೆ’ ಎಂದು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !