ಮೆಟ್ರೊ, ಬಸ್‌ ಪ್ರಯಾಣಕ್ಕೆ ಒಂದೇ ಸ್ಮಾರ್ಟ್‌ ಕಾರ್ಡ್‌

ಬುಧವಾರ, ಜೂನ್ 19, 2019
22 °C

ಮೆಟ್ರೊ, ಬಸ್‌ ಪ್ರಯಾಣಕ್ಕೆ ಒಂದೇ ಸ್ಮಾರ್ಟ್‌ ಕಾರ್ಡ್‌

Published:
Updated:
Prajavani

ಬೆಂಗಳೂರು: ‘ಸದ್ಯ ಇರುವ ಸ್ಮಾರ್ಟ್‌ ಕಾರ್ಡ್‌ಗಳು ಆಯಾ ಮೆಟ್ರೊ ವ್ಯಾಪ್ತಿಗೆ ಮಾತ್ರವೇ ಸೀಮಿತವಾಗಿವೆ. ಆದರೆ ಇನ್ನುಮುಂದೆ ಒಂದೇ ಸ್ಮಾರ್ಟ್‌ ಕಾರ್ಡ್‌ ಬಳಸಿ ಮೆಟ್ರೊ ರೈಲಿನಲ್ಲಿ ಮಾತ್ರವಲ್ಲ, ದೇಶದಾದ್ಯಂತ ಯಾವುದೇ ಸಾರಿಗೆಯಲ್ಲಾದರೂ ಸಂಚರಿಸಬಹುದಾಗಿದೆ. ಇಂತಹ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದೆ’ ಎಂದು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ (ಬಿಇಎಲ್‌) ಸಿಎಂಡಿ ಗೌತಮ್‌ ಎಂ.ವಿ. ತಿಳಿಸಿದರು.

‘ಮೊದಲಿಗೆ ದೇಶದಲ್ಲಿರುವ ಮೆಟ್ರೊ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ದೆಹಲಿ ಮೆಟ್ರೊದಲ್ಲಿ ಪ್ರಯಾಣಿಸಲು ಬಳಸುತ್ತಿರುವ ಸ್ಮಾರ್ಟ್‌ ಕಾರ್ಡ್‌ ಅನ್ನೇ ಬೆಂಗಳೂರು ಅಥವಾ ಕೊಚ್ಚಿ ಮೆಟ್ರೊದಲ್ಲಿಯೂ ಬಳಸಬಹುದು. ನಂತರ ರಸ್ತೆ ಸಾರಿಗೆಗೂ ಇದು ವಿಸ್ತರಣೆಗೊಳ್ಳಲಿದೆ.

‘ಸಿ–ಡಾಕ್‌ ಜತೆಗೂಡಿ ವಿನ್ಯಾಸಗೊಳಿಸಿರುವ ಸ್ವಯಂಚಾಲಿತ ಶುಲ್ಕ ಸಂಗ್ರಹಣೆ’ಯ (ಎಎಫ್‌ಸಿ) ಹೊಸ ಗೇಟ್‌ಗಳು ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದಿವೆ. ಪ್ರಸಕ್ತ ವರ್ಷದಲ್ಲಿಯೇ ಈ ಗೇಟ್‌ಗಳನ್ನು ಹಂತ ಹಂತವಾಗಿ ದೇಶದಾದ್ಯಂತ ಎಲ್ಲಾ ನಿಲ್ದಾಣಗಳಲ್ಲಿಯೂ ಅಳವಡಿಸಲಾಗುವುದು’ ಎಂದು ತಿಳಿಸಿದರು.

‘ರಾಷ್ಟ್ರೀಕೃತ ಬ್ಯಾಂಕ್‌ಗಳ ಸಹಯೋಗದೊಂದಿಗೆ ಇದನ್ನು ಜಾರಿಗೊಳಿಸಲಾಗುವುದು. ಸದ್ಯ ಈ ಯೋಜನೆ ಜಾರಿಗೆ ಎಸ್‌ಬಿಐ ಜತೆಗಿನ ಪಾಲುದಾರಿಕೆ ಬಹುತೇಕ ಅಂತಿಮ ಹಂತದಲ್ಲಿದೆ. ಕೇಂದ್ರ ಸರ್ಕಾರ ಘೋಷಿಸಿರುವ ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ) ಮಿಷನ್‌ ಅಡಿ ಇದನ್ನು ಕಾರ್ಯಗತಗೊಳಿಸಲಾಗುತ್ತಿದೆ’ ಎಂದು ವಿವರಿಸಿದರು.

ದೆಹಲಿಯಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದೆ. ದೆಹಲಿ ಮೆಟ್ರೊಗಳಿಗೆ ಬಳಸುತ್ತಿದ್ದ ಕಾರ್ಡ್‌ ಅನ್ನೇ ಬಸ್‌ನಲ್ಲಿ ಪ್ರಯಾಣಿಸಲೂ ಬಳಸಬಹುದಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !