ಭಾನುವಾರ, ಮಾರ್ಚ್ 29, 2020
19 °C

ಮೊಬೈಲ್ ಫೋನ್ ಸ್ಫೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ಸಮೀಪದ ಚುಂಗಡಿಪುರ ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಅವರ ರೆಡ್‍ ಮಿ ಕಂಪನಿಯ ಸ್ಮಾರ್ಟ್ ಮೊಬೈಲ್ ಫೋನ್ ಗುರುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮನೆಯಲ್ಲಿ ಸ್ಫೋಟವಾಗಿದೆ. ಅದೃಷ್ಟವಶಾತ್‌ ಯಾವುದೇ ಅನಾಹುತವಾಗಿಲ್ಲ.

‘ಮನೆಯವರೆಲ್ಲ ನಿದ್ರೆಯಲ್ಲಿದ್ದಾಗ ಏಕಾಏಕಿ ಗುಂಡು ಹಾರಿಸಿದಂತೆ ಶಬ್ದವಾಗಿದೆ. ಎದ್ದು ನೋಡಿದರೆ ಕೊಠಡಿಯೆಲ್ಲಾ ಹೊಗೆಯಿಂದ ತುಂಬಿತ್ತು. ಸ್ವಲ್ಪ ಹೊತ್ತು ಏನಾಗಿದೆ ಎಂದು ತಿಳಿಯಲಿಲ್ಲ. ನಂತರ ಮಲಗುವ ಸಮಯದಲ್ಲಿ ರ‍್ಯಾಕ್‌ನಲ್ಲಿ ಇಟ್ಟಿದ್ದ ಮೊಬೈಲ್‌ ಫೋನ್‌ ಸ್ಫೋಟವಾಗಿದ್ದು ಗೊತ್ತಾಯಿತು. ಅದರೊಂದಿಗಿದ್ದ ₹ 2 ಸಾವಿರ ನಗದು ಸುಟ್ಟು ಹೋಗಿದೆ’ ಎಂದು ಮಹೇಶ್‌ ತಿಳಿಸಿದರು.

‘ಚಾಮರಾಜನಗರ ಅಂಗಡಿಯೊಂದರಲ್ಲಿ 9 ತಿಂಗಳ ಹಿಂದೆ ಮೊಬೈಲ್ ಖರೀದಿಸಿದ್ದೆ. ಮಲಗುವಾಗ ದೂರವಿಟ್ಟಿದ್ದರಿಂದ ನಮಗೇನೂ ಅನಾಹುತವಾಗಿಲ್ಲ. ಸ್ಫೋಟಗೊಂಡ ಮೊಬೈಲ್‍ ಫೋನ್‌ಅನ್ನು ಅಂಗಡಿಗೆ ಹಿಂತಿರುಗಿಸುವುದಾಗಿ’ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು