ಭಾನುವಾರ, ಡಿಸೆಂಬರ್ 15, 2019
24 °C

ವೈದ್ಯ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್‌ನ ಮನೆಯಲ್ಲಿ ತಾಯಿ ಹಾಗೂ ತಂಗಿಯನ್ನು ಕೊಂದಿದ್ದ ಆರೋಪದಡಿ ವೈದ್ಯ ಗೋವಿಂದ ಪ್ರಕಾಶ್‌ನನ್ನು (45) ಪೊಲೀಸರು ಬಂಧಿಸಿದ್ದಾರೆ.

ತನಗೆ ಮದುವೆಯಾಗಿಲ್ಲವೆಂದು ಮಾನಸಿಕವಾಗಿ ನೊಂದಿದ್ದ ಎನ್ನಲಾದ ವೈದ್ಯ, ತಾಯಿ ಮೂಕಾಂಬಿಕಾ (75) ಹಾಗೂ ತಂಗಿ ಶ್ಯಾಮಲಾ (40) ಅವರಿಗೆ ವಿಷದ ಚುಚ್ಚುಮದ್ದು ನೀಡಿ ಕೊಂದಿದ್ದ. ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘45 ವರ್ಷವಾದರೂ ಯಾವ ಹುಡುಗಿಯೂ ನನ್ನನ್ನು ಮದುವೆಯಾಗಲು ಇಷ್ಟ ಪಡುತ್ತಿರಲಿಲ್ಲ. ಅದನ್ನೇ ಮುಂದಿಟ್ಟುಕೊಂಡು ಸ್ನೇಹಿತರು ಪದೇ ಪದೇ ರೇಗಿಸುತ್ತಿದ್ದರು. ಅದು ಮನಸ್ಸಿಗೆ ನೋವುಂಟು ಮಾಡಿತ್ತು. ತಂಗಿ ಹಾಗೂ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ, ಮೂವರು ಸೇರಿಯೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆವು’ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ

ಪ್ರತಿಕ್ರಿಯಿಸಿ (+)