ಭಾನುವಾರ, ಡಿಸೆಂಬರ್ 8, 2019
19 °C

ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್‌ ಅವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಕಟ್ಟಡ ಹಾಗೂ ಸುತ್ತಮುತ್ತಲಿನ ಪ್ರದೇಶ ಅವ್ಯವಸ್ಥೆಗಳಿಂದ ಕೂಡಿದೆ.

ಶೌಚಾಲಯ ಶಿಥಿಲಗೊಂಡಿದ್ದು ಮುರಿದು ಬೀಳುವ ಸ್ಥಿತಿಯಲ್ಲಿದೆ. ನೀರಿನ ಸೌಲಭ್ಯವೂ ಇಲ್ಲ. ಬೆಂಗಳೂರು ಒನ್‌ ಕೇಂದ್ರದ ಕಟ್ಟಡವೂ ಇದೇ ಅವ್ಯವಸ್ಥೆ ಎದುರಿಸುತ್ತಿದೆ. ದಾಖಲೆಗಳಿಗೆ ರಕ್ಷಣೆ ಇಲ್ಲವಾಗಿದೆ.

ಕಟ್ಟಡ ಸಾಮಗ್ರಿಗಳು, ಪೈಪ್‌ಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ. ಅವುಗಳು ನಿರುಪಯುಕ್ತಗೊಳ್ಳುತ್ತಿವೆ. ಕಟ್ಟಡದ ಹೊರ ಆವರಣದ ಫುಟ್‌ಪಾತ್‌ನ ಚಪ್ಪಡಿಗಳು ಕಿತ್ತುಹೋಗಿವೆ. ಯದ್ವಾತದ್ವಾ ಪಾರ್ಕಿಂಗ್‌ನಿಂದ ಜನಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆಯನ್ನು ಫುಟ್‌ಪಾತ್‌ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ಅಧಿಕಾರಿಗಳು ಇತ್ತ ಗಮನಹರಿಸಿ ಲೋಪ ಸರಿಪಡಿಸಬೇಕು ಎಂಬುದು ಜನರ ಒತ್ತಾಯ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು