ಶುಕ್ರವಾರ, ನವೆಂಬರ್ 22, 2019
27 °C

ಮರಳಿ ಬಂದಿದೆ ಒರಾಯನ್ ಶಾಪಿಂಗ್ ಹಬ್ಬ

Published:
Updated:
Prajavani

ರಾಜಾಜಿನಗರದ ಬ್ರಿಗೇಡ್‌ ಗೇಟ್ ವೇ ನಲ್ಲಿರುವ ‘ಒರಾಯನ್ ಮಾಲ್‌’ನಲ್ಲಿ ವಾರ್ಷಿಕ ಶಾಪಿಂಗ್ ಫೆಸ್ಟಿವಲ್ ಆಯೋಜನೆಗೊಂಡಿದೆ. ದೀಪಾವಳಿಗೆ ಆಕರ್ಷಕವಾದ ಕೊಡುಗೆಗಳು, ಅದ್ಭುತ ಬಹುಮಾನಗಳು ಇದರ ವಿಶೇಷ. ಈ ಕೊಡುಗೆಗಳ ಜತೆಗೆ ಈ ಸಲದ ಮಾಲ್‌  ಸಿಂಗಾರ ಕೂಡ ಆಕರ್ಷನೀಯವಾಗಿದೆ. ಹಬ್ಬದ ತಿಂಗಳ ಉತ್ಸಾಹವನ್ನು ಹೆಚ್ಚಿಸುವಂತಿದೆ. ಈ ಹಬ್ಬ ನವೆಂಬರ್ 3ರವರೆಗೆ ನಡೆಯಲಿದೆ.

ಗ್ರಾಹಕರು ವಾರದ ಬಹುಮಾನವಾಗಿ ‘ಹರ‍್ಲೆ ಡೇವಿಡ್ ಸನ್ ಸ್ಟ್ರೀಟ್ 750’ ಹಾಗೂ ದೈನಂದಿನ ಬಹುಮಾನವಾಗಿ ಅತ್ಯಾಧುನಿಕ ‘ಒನ್ ಪ್ಲಸ್ 7’ ಫೋನ್‌ಗಳನ್ನು ಗೆಲ್ಲುವ ಅವಕಾಶವಿದೆ. ಇಲ್ಲಿ ಶಾಪರ್ಸ್‌ಗಳಿಗೆ ತಮ್ಮ ನೆಚ್ಚಿನ ಬ್ರ‍್ಯಾಂಡ್‌ಗಳು ಎಲ್ಲವೂ ಒಂದೆಡೆ ಸಿಗಲಿವೆ. ಇದರ ಜತೆಗೆ ಆಲ್ –ಇನ್ –ಒನ್ ಅನುಭವಕ್ಕಾಗಿ ವಿಶ್ವ ದರ್ಜೆಯ ಆಹಾರ ಹಾಗೂ ವಿರಾಮದ ಅನುಭವಕ್ಕಾಗಿ ಎಲ್ಲರೂ ಒಟ್ಟಿಗೆ ಸೇರುತ್ತಾರೆ. ‘ನಗರದ ಶಾಪಿಂಗ್ ಜಗತ್ತಿಗೆ ನಾವು ಆದ್ಯತೆಯ ಆಯ್ಕೆಯಾಗಿದ್ದೇವೆ’ ಎಂದು ಒರಾಯನ್ ಮಾಲ್‌ನ ಸೀನಿಯರ್ ಜಿಎಂ ವಿಜಯ್ ಕುಮಾರ್ ಭಾಟಿಯಾ ಹೇಳಿಕೊಳ್ಳುತ್ತಾರೆ.

ಪ್ರತಿಕ್ರಿಯಿಸಿ (+)