ಯು.ಪಿ. ಪುರಾಣಿಕರ ಕೃತಿ ಬಿಡುಗಡೆ

ಬೆಂಗಳೂರು: ‘ಗುರು ರಾಘವೇಂದ್ರ ಸ್ವಾಮೀಜಿ ಅವರು ಜಾತ್ಯತೀತ, ಧರ್ಮ ಸೌಹಾರ್ದದ ನಿಲುವನ್ನು ಜೀವನದ ಉದ್ದಕ್ಕೂ ಹೇಗೆ ಪಾಲಿಸಿದ್ದಾರೆ ಎಂಬುವುದರ ಕುರಿತು ‘ವಿಶ್ವಗುರು ಶ್ರೀ ರಾಘವೇಂದ್ರರು’ ಪುಸ್ತಕ ಬೆಳಕು ಚೆಲ್ಲುತ್ತದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಹೇಳಿದರು.
ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ ಹಾಗೂ ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಹಣಕಾಸು ಬರಹಗಾರ ಯು.ಪಿ. ಪುರಾಣಿಕ್ ಅವರ ‘ವಿಶ್ವಗುರು ಶ್ರೀ ರಾಘವೇಂದ್ರರು’, ‘ಯಾರಿಗೆ ಬೇಡ ದುಡ್ಡು!?’ ಹಾಗೂ ‘ಉಳಿತಾಯದ ಉಪಾಯಗಳು’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜಾತಿ ಹಾಗೂ ಧರ್ಮದ ಹೆಸರಲ್ಲಿ ಇಂದು ತಾರತಮ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮೀಜಿ ಕುರಿತ ಈ ಪುಸ್ತಕ ಹೆಚ್ಚು ಪ್ರಸ್ತುತವಾಗಿದೆ’ ಎಂದರು.
‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಆಯ್ದ ಬರಹಗಳ ಸಂಗ್ರಹ ರೂಪ ‘ಉಳಿತಾಯದ ಉಪಾಯಗಳು’ ಕುರಿತು ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಹಾಗೂ ‘ಯಾರಿಗೆ ಬೇಡ ದುಡ್ಡು!?’ ಕೃತಿ ಕುರಿತು ಸಿಂಡಿಕೇಟ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಸಾಯಿರಾಮ ಹೆಗಡೆ ಮಾತನಾಡಿದರು.
***
l ಪುಸ್ತಕ: ಯಾರಿಗೆ ಬೇಡ ದುಡ್ಡು!?
ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ, ಯಳಗಲ್ಲು
ಪುಟ: 158
ಬೆಲೆ: ₹140
***
l ಪುಸ್ತಕ: ವಿಶ್ವಗುರು ಶ್ರೀ ರಾಘವೇಂದ್ರರು
ಪುಟ: 136
ಬೆಲೆ: ₹150
***
l ಪುಸ್ತಕ: ಉಳಿತಾಯದ ಉಪಾಯಗಳು
ಪುಟ: 105
ಬೆಲೆ: ₹90
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.