ಬುಧವಾರ, ಏಪ್ರಿಲ್ 21, 2021
25 °C

ನಗರದ ಹಲವಡೆ ಗುಡುಗು, ಮಿಂಚು ಸಹಿತ ಭಾರಿ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಬುಧವಾರ ರಾತ್ರಿ ಜೋರಾಗಿ ಮಳೆ ಸುರಿಯಿತು.

ಅದರಲ್ಲೂ  ಜಕ್ಕೂರು, ಯಲಹಂಕ, ಹೆಬ್ಬಾಳ, ಶಿವಾಜಿನಗರ, ಕೆ.ಆರ್‌. ವೃತ್ತ, ಬನಶಂಕರಿ, ಜೆ.ಪಿ. ನಗರ, ಜಯನಗರ, ಚಾಮರಾಜಪೇಟೆ, ಶ್ರೀರಾಮಪುರ, ಮೆಜೆಸ್ಟಿಕ್, ರಾಜಾಜಿನಗರ, ಸಂಪಂಗಿರಾಮನಗರ, ಕೋರಮಂಗಲ, ಶಾಂತಿನಗರ, ಯಶವಂತಪುರ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ.

ಬಹುತೇಕ ಭಾಗಗಳಲ್ಲಿ ರಾತ್ರಿ 9.30ರಿಂದ ಗುಡುಗು, ಮಿಂಚು ಸಹಿತ ಆರಂಭವಾದ ಮಳೆ ರಾತ್ರಿ 11 ಗಂಟೆವರೆಗೆ ಸುರಿದಿದೆ. ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವಾಹನ ಸವಾರರು ದಿಢೀರ್‌ ಸುರಿದ ಮಳೆಯಲ್ಲಿ ಸಿಲುಕಿಕೊಂಡರು.

ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ದಟ್ಟಣೆ ಉಂಟಾಯಿತು. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಪರದಾಡಿದರು.

ಸಂಪಂಗಿರಾಮನಗರದಲ್ಲಿ ಬುಧವಾರ ರಾತ್ರಿ 10.45ಕ್ಕೆ 10 ಮಿ.ಮೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಿಬ್ಬಂದಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.