ಬುಧವಾರ, ಏಪ್ರಿಲ್ 21, 2021
32 °C

ರಾಜಭವನಕ್ಕೆ ಅಕ್ರಮ ಪ್ರವೇಶ: ವ್ಯಕ್ತಿ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಭವನದೊಳಗೆ ಅಕ್ರಮವಾಗಿ ಪ್ರವೇಶಿಸಿದ್ದ ಆರೋಪದಡಿ ಇಸ್ಮಾಯಿಲ್ ಎಂಬುವರನ್ನು ವಶಕ್ಕೆ ಪಡೆದಿದ್ದ ವಿಧಾನಸೌಧ ಪೊಲೀಸರು, ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.

‌ಕಂಪನಿಯೊಂದರ ಉದ್ಯೋಗಿಯಾದ ಇಸ್ಮಾಯಿಲ್, ಊಟಕ್ಕೆಂದು ಶಾಸಕರ ಭವನದ ಹೋಟೆಲ್‌ಗೆ ಅ. 28ರಂದು ಬಂದಿದ್ದರು. ಊಟದ ನಂತರ ಬೈಕ್‌ನಲ್ಲಿ ರಾಜಭವನದೊಳಗೆ ಪ್ರವೇಶಿಸಿದ್ದರು. ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ ಬಾಲಕೃಷ್ಣ, ಅವರನ್ನು ಪೊಲೀಸರ ವಶಕ್ಕೆ ನೀಡಿದ್ದರು.

‘ಇಸ್ಮಾಯಿಲ್‌ ಅವರಿಗೆ ಶಾಸಕರ ಭವನದಿಂದ ಹೊರಗೆ ಹೋಗುವ ದಾರಿ ಬಗ್ಗೆ ಗೊತ್ತಿರಲಿಲ್ಲ. ತಪ್ಪು ದಾರಿಯಲ್ಲಿ ಹೋಗಿ ಹಿಂಬಾಗಿಲಿನಿಂದ ರಾಜಭವನದ ಒಳಗೆ ಪ್ರವೇಶಿಸಿದ್ದರು. ವಿಚಾರಣೆ ನಡೆಸಿದಾಗ, ತಮಗೆ ಗೊತ್ತಿಲ್ಲದೇ ಒಳಗೆ ಹೋದೆ ಎಂದು ಇಸ್ಮಾಯಿಲ್ ಹೇಳಿದರು. ಪುನಃ ಆ ರೀತಿ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದೇವೆ’ ಎಂದು ವಿಧಾನಸೌಧ ಪೊಲೀಸರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು