ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಪ್ರದಾನ

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಏಳನೆಯ ದೀಕ್ಷಾಂತ ಘಟಿಕೋತ್ಸವ
Last Updated 31 ಜನವರಿ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಏಳನೆಯ ದೀಕ್ಷಾಂತ ಘಟಿಕೋತ್ಸವ ಗುರುವಾರ ನಡೆಯಿತು, ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯ ನಾಲ್ಕು ವಿದ್ಯಾರ್ಥಿಗಳಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಿದೆ.

ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ಗವಿಮಠಾಧೀಶ ನಾಲ್ವಡಿ ಶಾಂತಲಿಂಗ ಶಿವಚಾರ್ಯ ಸ್ವಾಮೀಜಿ ಅವರಿಗೆ ಗೌರವ ಡಿ.ಲಿಟ್‌ ನೀಡಿ ಗೌರವಿಸಲಾಯಿತು.

2017–18 ನೇ ಸಾಲಿನ ಬಿ.ಎ ವಿದ್ವನ್ಮಧ್ಯಮಾ 318 ವಿದ್ಯಾರ್ಥಿಗಳು ಮತ್ತು ಎಂಎ ಆಚಾರ್ಯ 222 ವಿದ್ಯಾರ್ಥಿಗಳಿಗೆ ಪದವಿ ನೀಡಲಾಯಿತು.

ಸ್ವರ್ಣ ಪದಕ ಪುರಸ್ಕೃತ ವಿದ್ಯಾರ್ಥಿಗಳ ವಿವರ: ಶ್ರೀವಲ್ಲಿ ಮಂಜುನಾಥ ಹೆಗಡೆ, ಸುಬ್ರಹ್ಮಣ್ಯ ಕೇಶವ ಭಟ್ಟ್, ಜೆ.ಪಾಂಡುರಂಗ ಜೋಷಿ, ವಿನೋದ್ ಭಟ್‌, ಶ್ರೀಶ ಬಿ.ಎನ್, ಶಿವಶರಣ ಸಿದ್ರಾಮಯ್ಯ ಶೇಖ, ಉಮೇಶ್‌ ಹೊಳ್ಳ, ಸುರೇಶ್‌ ಎಸ್‌. ಜೋಗಿ, ಸುನೀಲ್‌.

ಇನ್ಫೊಸಿಸ್‌ ಫೌಂಡೇಷನ್‌ ದತ್ತಿನಿಧಿ ಬಹುಮಾನಿತರು– ಆರ್‌. ಕೆ. ಶಶಿಧರ್‌, ಆದಿತ್ಯ ಪ್ರಕಾಶ ಸುತಾರ, ಗೌರಿ.ಟಿ, ಅಶ್ವಿನಿ. ಎಸ್‌. ಅನನ್ಯ.

ನಗದು ಬಹುಮಾನ ಪಡೆದ ಎಂಎ ವಿದ್ಯಾರ್ಥಿಗಳು– ಶ್ವೇತ ನಂದಿನಿ, ಶ್ರೀವಲ್ಲಿ ಮಂಜುನಾಥ ಹೆಗಡೆ, ವಿನೋದ್ ಭಟ್, ಸಚಿನ್‌ ದ್ವಿವೇದಿ, ಜ್ಯೋತಿಷಶಾಸ್ತ್ರದ ನಗದು ಬಹುಮಾನ– ಲಲಿತಾ ಎಂ.

‘ಸಂಸ್ಕೃತ ಭಾಷೆಯಲ್ಲ ಶಕ್ತಿ’: ‘ಸಂಸ್ಕೃತ ಕೇವಲ ಭಾಷೆಯಲ್ಲ ಶಕ್ತಿ. ಪ್ರತಿಯೊಂದು ಅಕ್ಷರವೂ ಮಂತ್ರ. ದೇವಭಾಷೆಯೂ ಹೌದು, ಮಾನವೀಯ ಮೌಲ್ಯದ ಗುಣಗಳನ್ನು ಹೊಂದಿದೆ’ ಎಂದು ಘಟಿಕೋತ್ಸವ ಭಾಷಣ ಮಾಡಿದ ತುಮಕೂರಿನ ರಾಮಕೃಷ್ಣ– ವಿವೇಕಾನಂದ ಆಶ್ರಮದ ಸರಸ್ವತೀ ಸ್ವಾಮೀಜಿ ಹೇಳಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪದ್ಮಾಶೇಖರ್‌ ಮಾತನಾಡಿದರು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT