ಮಂಗಳವಾರ, ಜನವರಿ 21, 2020
18 °C

ಪೇಜಾವರ ಶ್ರೀಗಳಿಗೆ ಅನಾರೋಗ್ಯ: ವಿಶೇಷ ಪ್ರಾರ್ಥನೆ

Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ತೀವ್ರ ಅನಾರೋಗ್ಯದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಬೇಗನೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಶುಕ್ರವಾರ ಬಾಗಲಕೋಟೆಯ ನವನಗರದ 8ನೇ ಸೆಕ್ಟರ್‌ನಲ್ಲಿರುವ ಶ್ರೀಕೃಷ್ಣ ಮಠದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. 

ಅಖಿಲ ಭಾರತ ಮಧ್ವಮಹಾಮಂಡಳದ ವಸತಿ ನಿಲಯದ ವಿದ್ಯಾರ್ಥಿಗಳು ಶ್ರೀಕೃಷ್ಣ ಪೂಜೆ ನೆರವೇರಿಸಿದರು. ಮಂಡಳದ ಕಾರ್ಯದರ್ಶಿ ಬಿ.ಜೆ. ಮಾಕೋಡ, ವ್ಯವಸ್ಥಾಪಕ ಪ್ರಮೋದಾಚಾರ್ಯ ಆಲೂರ, ಪಂ.ನವೀನಾಚಾರ್ಯ ಜೋಶಿ, ಸಂತೋಷ ಗದ್ದನಕೇರಿ ನೇತೃತ್ವದಲ್ಲಿ ಧನ್ವಂತರಿ ಜಪ, ಸುಳಾದಿಗಳು, ವಾಯುಸ್ತುತಿ, ವಿಷ್ಣುಸಹಸ್ರನಾಮ, ರಾಯರ ಸ್ತೋತ್ರ ಪಾರಾಯಣ ಮಾಡಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು