ಫೆ.11ರಂದು ಸುಬ್ರಹ್ಮಣ್ಯೇಶ್ವರ ರಥೋತ್ಸವ

7

ಫೆ.11ರಂದು ಸುಬ್ರಹ್ಮಣ್ಯೇಶ್ವರ ರಥೋತ್ಸವ

Published:
Updated:

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕು ಸುಬ್ರಹ್ಮಣ್ಯಪುರದಲ್ಲಿನ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಜತ ರಥೋತ್ಸವವು ಫೆ.11ರ ಮಧ್ಯಾಹ್ನ 12ರಿಂದ ನಡೆಯಲಿದೆ.

ಉತ್ಸವದ ಪ್ರಯುಕ್ತ ಫೆ.8ರಂದು ಮೂಲದೇವತಾ ಪ್ರಾರ್ಥನೆ, ಗಣಪತಿ ಪೂಜೆ, ರುದ್ರಾಭಿಷೇಕ, ಸ್ವಸ್ತಿ ಪುಣ್ಯಾಹವಾಚನಾ, ಮಹಾಸಂಕಲ್ಪ, ಯಾಗಾಶಾಲಾ ಪ್ರವೇಶ, ಧ್ವಜಾರೋಹಣ, ಕಲಶಸ್ಥಾಪನ, ವಾಸ್ತು ಹೋಮ, ಶೇಷವಾಹನೋತ್ಸವ, ಮಹಾಮಂಗಳಾರತಿ; ಫೆ.9 ರಂದು ರುದ್ರಾಭಿಷೇಕ, ನಿತ್ಯಹೋಮ, ಪ್ರಾಕಾರೋತ್ಸವ, ಸಂಹಾರೋತ್ಸವ, ಮಯೂರವಾಹನೋತ್ಸವ; ಫೆ.10ರಂದು ಅಭಿಷೇಕ, ಹೋಮ, ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ಸಂಗೀತ ಕಾರ್ಯಕ್ರಮ ಆಯೋಜಿಲಾಗಿದೆ. 

ಫೆ.11ರಂದು ರುದ್ರಾಭಿಷೇಕ, ನವಗ್ರಹಪೂಜಾ, ಯಾತ್ರಾದಾನ, ರಜತ ರಥೋತ್ಸವ, ಮಹಾಮಂಗಳಾರತಿ; ಫೆ.12ರಂದು ಪೂರ್ಣಾಹುತಿ, ಚೂರ್ಣೋತ್ಸವ, ತೀರ್ಥೊತ್ಸವ, ವಸಂತಮಾಧವ ಪೂಜೆ, ಶಯನೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಟ್ರಸ್ಟ್‌ ಪ್ರಕಟಣೆಯಲ್ಲಿ ತಿಳಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !