ಶುಕ್ರವಾರ, ಜೂನ್ 5, 2020
27 °C
ಕಕ್ಕಯ್ಯ ಮಂದಿರದಲ್ಲಿ 57ನೇ ಅರಿವು-ಆಚಾರ ಕಾರ್ಯಕ್ರಮ

‘ವಚನಗಳು ಇಂದಿಗೂ ಪ್ರಸ್ತುತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಕ್ಕೇರಾ: ಪಟ್ಟಣದ ಶರಣ ಕಕ್ಕಯ್ಯರ ಮಂದಿರದಲ್ಲಿ ಸೋಮವಾರ ಸಂಜೆ ಹುಣ್ಣಿಮೆ ಆಚರಣೆ ಪ್ರಯುಕ್ತ 57ನೇ ಅರಿವು-ಆಚಾರ ಕಾರ್ಯಕ್ರಮ ನಡೆಯಿತು.

ಬಾಚಿಮಟ್ಟಿಯ ಶರಣಜೀವಿ ಸಿದ್ದಲಿಂಗಯ್ಯ ಸ್ವಾಮಿ ಮಾತನಾಡಿ,‘12ನೇ ಶತಮಾನದ ಶರಣ-ಶರಣೆಯರ ವಚನಗಳು ಇಂದಿಗೂ ಪ್ರಸ್ತುತ’ ಎಂದರು.

ವಚನಗಳು ಚತುರೋಕ್ತಿಗೆ ಸೀಮಿತಗೊಳ್ಳದೆ, ಮನುಷ್ಯ ಚಾರಿತ್ರ್ಯ, ಸಕಾರಾತ್ಮಕ ಕ್ರಿಯಾಶೀಲತೆ, ಶೀಲ-ಆಚಾರಗಳೊಂದಿಗೆ ಸಂತೃಪ್ತ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತವೆ ಎಂದು ಹೇಳಿದರು.

ಶರಣರು ದಾಸೋಹವನ್ನೇ ಕರ್ತವ್ಯವನ್ನಾಗಿಸಿಕೊಂಡು, ಸಮಾನತೆಗಾಗಿ ಹಂಬಲಿಸಿದರು ಎಂದು ಪ್ರತಿಪಾದಿಸಿದರು.

ಶರಣರಾದ ದಾನಪ್ಪ ದ್ಯಾಮನಾಳ ಕುಪ್ಪಿ ಮಾತನಾಡಿ,‘ಬಸವ ಸೇವಾ ಸಮಿತಿಯವರು ಹುಣ್ಣಿಮೆ ಪ್ರಯುಕ್ತ ನಿರಂತರವಾಗಿ ಪ್ರತಿ ಸೋಮವಾರ ಹಾಗೂ ಗುರುವಾರ ಮನೆ ಮನ ಬಸವ ಬೆಳಗು ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ’ ಎಂದರು.

ಶರಣಜೀವಿಗಳಾದ ಮಲ್ಲಿಕಾರ್ಜುನಸ್ವಾಮಿ ಹಿರೇಮಠ, ನಂದಯ್ಯಸ್ವಾಮಿ, ಚಂದ್ರಕಾಂತ ಸಕ್ರಿ, ನಂದಪ್ಪ ಕುರಿ, ಪ್ರಕಾಶ ಕುಂಬಾರ, ಸೋಮಶೇಖರ ಯಾಳಗಿ, ಈರಯ್ಯಸ್ವಾಮಿ, ವೈ.ಜಿ.ಬೇವೂರ,ಬಸವರಾಜ ಗೋವಿಂದರ, ಸಂಗಣ್ಣ ದೇಸಾಯಿ, ಪ್ರಭು ಹಡಪದ, ನಾಗರಾಜ ಮಡಿವಾಳ, ಆನಂದ ಕಾತರಕಿ, ಗುರಣ್ಣ ಕುಂಬಾರ, ಸಂಗಣ್ಣ ಮಡ್ಡಿ ಹಾಗೂ ಸೋಮಶೇಖರ ಗಿಟಗಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು