ಬೆಂಗಳೂರು: ನಗರದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ವೈಟ್ ಟಾಪಿಂಗ್ ರಸ್ತೆಗಳಲ್ಲಿ ಸೈಕಲ್ ಪಥಗಳಿರುತ್ತವೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಹೇಳಿದ್ದಾರೆ.

ಟೆಂಡರ್‌ಶ್ಯೂರ್ ಆಗಿರುವ ಹಲವು ರಸ್ತೆಗಳಲ್ಲಿ ಈಗಾಗಲೇ ಸೈಕಲ್ ಪಥಗಳಿವೆ. ₹ 80 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಸೈಕಲ್ ಬಳಕೆಯ ವ್ಯವಸ್ಥೆಯಡಿ ಈಗಾಗಲೇ 120 ಕಿಮೀ ಸೈಕಲ್ ಪಥಗಳ ಗುರುತು ಹಾಕಲಾಗಿದ್ದು, ಹೊಸ ವೈಟ್ ಟಾಪಿಂಗ್ ರಸ್ತೆಗಳಲ್ಲಿ ಕೂಡ ಸೈಕಲ್ ಟ್ರಾಕ್‌ಗಳ ಗುರುತು ಹಾಕಲಾಗುವುದು ಎಂದರು.

ವಿಶ್ವ ಬೈಸಿಕಲ್ ದಿನದ ಅಂಗವಾಗಿ ಬೆಂಗಳೂರು ಸೈಕ್ಲಿಂಗ್ ಸಮುದಾಯದ ವತಿಯಿಂದ ನಡೆದ ಕಬ್ಬನ್ ಪಾರ್ಕ್‌ನಲ್ಲಿ ‘ರೈಡ್ ಫಾರ್ ಸೇಫ್ಟಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿಟಿಜನ್ ಫಾರ್ ಸಸ್ಟೈನೆಬಿಲಿಟಿ ಮೂಲಕ ನಡೆದ ಕಾರ್ಯಕ್ರಮಕ್ಕೆ ಅನೇಕ ಸರ್ಕಾರಿ ಸಂಸ್ಥೆಗಳು ಸಹಕಾರ ನೀಡಿದ್ದವು. ರಸ್ತೆಯಲ್ಲಿ ಪಾದಚಾರಿಗಳಿಗೆ ಮತ್ತು ಸೈಕಲ್ ಸವಾರರಿಗೆ ಸುರಕ್ಷತೆಯನ್ನು ಕಲ್ಪಿಸುವ ದೃಷ್ಟಿಯಿಂದ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನೂ ಈ ಸಂಸ್ಥೆಗಳು ಒಟ್ಟಾಗಿ ಹಮ್ಮಿಕೊಂಡಿವೆ.

ನಗರದ ಹೆಚ್ಚಿನ ಕಡೆಗಳಲ್ಲಿ ಬೈಕ್ ಡಾಕ್ ಮತ್ತು ಸೈಕಲ್ ಟ್ರಾಕ್‌ಗಳು ಬರಲಿ ಎಂಬ ಆಶಯ ನಮ್ಮದು ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.