ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತಹಳ್ಳಿ: ಇಂದಿನಿಂದ ದೊಡ್ಡಜಾತ್ರೆ ಸಂಭ್ರಮ

Last Updated 5 ಮೇ 2019, 19:09 IST
ಅಕ್ಷರ ಗಾತ್ರ

ಯಲಹಂಕ: ಅಮೃತಹಳ್ಳಿಯಲ್ಲಿ 8 ವರ್ಷಗಳಿಗೊಮ್ಮೆ ನಡೆಯುವ ದೊಡ್ಡಜಾತ್ರೆಯ ಪ್ರಯುಕ್ತ ಗ್ರಾಮದೇವತೆ ಮಾರಮ್ಮ ದೇವಿಯೊಂದಿಗೆ ವಿವಿಧ ದೇವರುಗಳ ಉತ್ಸವಗಳು ಮೇ 6ರಿಂದ 10ರವರೆಗೆ ನಡೆಯಲಿವೆ.

ಸೋಮವಾರ ಬೆಳಿಗ್ಗೆ ಗುಂಡಾಂಜನೇಯ ಸ್ವಾಮಿ, ಮುತ್ತುರಾಯಸ್ವಾಮಿ, ವೆಂಕಟೇಶ್ವರಸ್ವಾಮಿ, ಲಕ್ಷ್ಮೀನಾರಾಯಣಸ್ವಾಮಿ, ಈಶ್ವರ, ಗಣೇಶ ಮತ್ತು ನವಗ್ರಹಗಳಿಗೆ ಆರತಿ ಬೆಳಗಲಾಗುವುದು. ಮಂಗಳವಾರ ಅಗ್ನಿಕುಂಡಕ್ಕೆ ಪೂಜೆ, ಗಂಗಮ್ಮ, ಮುನೇಶ್ವರಸ್ವಾಮಿ ಮತ್ತು ಕಾಟೇರಮ್ಮ ದೇವರಿಗೆ ವಿಶೇಷ ಪೂಜೆ ನೆರವೇರಲಿದೆ.

ಬುಧವಾರ ಅಗ್ನಿಕುಂಡ ಪ್ರವೇಶ, ಉಯ್ಯಾಲೆ ಸೇವೆ, ವಿಶೇಷ ಆರತಿ, ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಗುರುವಾರ ಉರುಳುಸೇವೆ, ಉಟ್ಲುಕಾಯಿ ಹೊಡೆಯುವುದು, ಪಿಳ್ಳೇಕಮ್ಮ ಮತ್ತು ಶ್ರೀರಾಮಪುರದ ಮುನೇಶ್ವರಸ್ವಾಮಿಗೆ ಆರತಿಗಳು ಹಾಗೂ ಗ್ರಾಮದ ಎಲ್ಲ ದೇವರುಗಳ ಉತ್ಸವ ನಡೆಯಲಿದೆ. ಮೃತಿಕಮ್ಮ ದೇವಿಗೆ ಮಡಿಲು ತುಂಬಿದ ನಂತರ ದೇವಿಯ ಮೆರವಣಿಗೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT