ಗುರುವಾರ , ಆಗಸ್ಟ್ 6, 2020
26 °C

ಆಂಧ್ರಕ್ಕೆ ಮೂರು ರಾಜಧಾನಿ: ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮರಾವತಿ (ಪಿಟಿಐ): ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರ ಮಂಡಿಸಿದ್ದ ‘ಮೂರು ರಾಜಧಾನಿಗಳ ಮಸೂದೆ’ಗೆ ರಾಜ್ಯಪಾಲ ವಿಶ್ವಭೂಷಣ್‌ ಹರಿಚಂದ್ರನ್‌ ಒಪ್ಪಿಗೆ ನೀಡಿದ್ದಾರೆ. 

ಎರಡು ಮಸೂದೆಗಳನ್ನು ಜನವರಿ 20 ಮತ್ತು ಜೂನ್ 16ರಂದು ಶಾಸಕಾಂಗವು ಎರಡು ಬಾರಿ ಅಂಗೀಕರಿಸಿತ್ತು. ಇದೀಗ ಅಧಿಕೃತ ಒಪ್ಪಿಗೆಯನ್ನು ರಾಜ್ಯಪಾಲರು ನೀಡಿದ್ದಾರೆ. ಕಾಯ್ದೆ ಜಾರಿ ವಿರೋಧಿಸಿ ಈಗಾಗಲೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಆದರೆ, ವಿಚಾರಣೆ ಆರಂಭವಾಗಿರಲಿಲ್ಲ.  

ಕಾಯ್ದೆಯನ್ವಯ ವಿಶಾಖಪಟ್ಟಣ, ಅಮರಾವತಿ ಮತ್ತು ಕರ್ನೂಲ್‌ ಕ್ರಮವಾಗಿ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ರಾಜಧಾನಿಗಳಾಗಲಿವೆ. ಇದಲ್ಲದೆ ಆಡಳಿತ ವಲಯಗಳ ಮರು ವಿಂಗಡಣೆ ಮತ್ತು ಅಭಿವೃದ್ಧಿ ಮಂಡಳಿಗಳ ಸ್ಥಾಪನೆಗೂ ಕಾಯ್ದೆಯು ಅವಕಾಶ ನೀಡಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು