ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿ ಧ್ವಂಸ ಪ್ರಕರಣ ರದ್ದುಮಾಡುವುದೇ ಹೋರಾಟಗಾರರಿಗೆ ನೀಡುವ ಗೌರವ: ಶಿವಸೇನಾ

Last Updated 22 ಜುಲೈ 2020, 10:21 IST
ಅಕ್ಷರ ಗಾತ್ರ

ಮುಂಬೈ: ‘ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಸುವುದಕ್ಕೂ ಮುನ್ನ, ಬಾಬರಿ ಮಸೀದಿ ಧ್ವಂಸ ಕುರಿತ ಪ್ರಕರಣವನ್ನು ರದ್ದು ಮಾಡುವುದು ರಾಮ ಜನ್ಮಭೂಮಿ ಹೋರಾಟದಲ್ಲಿ ಹುತಾತ್ಮರಾದವರಿಗೆ ನೀಡುವ ನಿಜವಾದ ಗೌರವವಾಗುತ್ತದೆ’ ಎಂದು ಶಿವಸೇನಾ ಹೇಳಿದೆ.

ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಈ ಕುರಿತ ಲೇಖನ ಪ್ರಕಟಿಸಿರುವ ಸೇನಾ, ‘ಬಾಬರ್ ಆಕ್ರಮಣಕಾರ ಎಂಬುದನ್ನು ಒಪ್ಪಿಕೊಂಡ ಕೂಡಲೇ, ಬಾಬರಿ ಮಸೀದಿ ಪ್ರಕರಣವು ಅಪ್ರಸ್ತುತ ಎನಿಸಿಬಿಡುತ್ತದೆ’ ಎಂದಿದೆ.

ರಾಮ ಮಂದಿರ ಕುರಿತ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದ ನಂತರವೂ, ಮಸೀದಿ ಕೆಡವಿದ ಘಟನೆಯ ತನಿಖೆಯನ್ನು ಸಿಬಿಐ ಮುಂದುವರಿಸಿದೆ. ಹೋರಾಟದ ಮುಂಚೂಣಿಯಲ್ಲಿದ್ದ ಎಲ್‌.ಕೆ. ಅಡ್ವಾಣಿ ಅವರು ಆರೋಪಿಯಾಗಿ ನ್ಯಾಯಾಲಯದ ಮುಂದೆ ಹಾಜರಾಗುತ್ತಿದ್ದಾರೆ. ಜುಲೈ 24ರಂದು ಸಿಬಿಐಯ ವಿಶೇಷ ನ್ಯಾಯಾಲಯವು ವಿಡಿಯೊ ಸಂವಾದದ ಮೂಲಕ ಅಡ್ವಾಣಿ ಅವರ ಹೇಳಿಕೆಯನ್ನು ದಾಖಲಿಸಲಿದೆ.

‘ಬಾಬರಿ ಮಸೀದಿ ಕೆಡವಿದ್ದನ್ನು ಜಗತ್ತೇ ನೋಡಿದೆ. ಅಂದು ಅನೇಕ ‘ಯೋಧ’ರ ಮುಖಗಳು ಭಯದಿಂದ ಕಪ್ಪಾಗಿದ್ದವು. ಮಸೀದಿ ಕೆಡವಿದ್ದು ನಾವಲ್ಲ, ಶಿವಸೇನಾದವರು’ ಎಂದು ಬಿಜೆಪಿಯ ಉಪಾಧ್ಯಕ್ಷ ಸುಂದರ್‌ಸಿಂಗ್‌ ಭಂಡಾರಿ ಹೇಳಿದ್ದರು. ಆದರೆ ಬಾಳಾಸಾಹೇಬ ಠಾಕ್ರೆ ಅವರು ‘ಶಿವಸೈನಿಕರೇ ಈ ಕಾರ್ಯ ಮಾಡಿದ್ದು ನಿಜವಾಗಿದ್ದಲ್ಲಿ, ಆ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಎದೆ ತಟ್ಟಿ ಹೇಳಿಕೊಂಡಿದ್ದರು’ ಎಂದು ಶಿವಸೇನಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT