ಸೋಮವಾರ, ಆಗಸ್ಟ್ 2, 2021
24 °C

ಪಿಪಿಇ ಕಿಟ್‌ ಧರಿಸಿ ಕಳ್ಳತನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಾತಾರಾ: ಕೊರೊನಾ ಯೋಧರು ಧರಿಸುವ ವೈಯಕ್ತಿಕ ರಕ್ಷಣಾ ಕವಚ (ಪಿಪಿಇ ಕಿಟ್‌) ಧರಿಸಿ ಚಿನ್ನಾಭರಣ ಮಳಿಗೆಗೆ ನುಗ್ಗಿದ ಕಳ್ಳರು, 780 ಗ್ರಾಂ ಚಿನ್ನವನ್ನು ಕದ್ದೊಯ್ದ ಘಟನೆ ಇಲ್ಲಿನ ಫಲಟಣ ಪ್ರದೇಶದಲ್ಲಿ ನಡೆದಿದೆ.

ಕಳ್ಳತನವು ಎರಡು ದಿನಗಳ ಹಿಂದೆ, ಲಾಕ್‌ಡೌನ್‌ ಅವಧಿಯಲ್ಲಿ ನಡೆದಿದೆ ಎನ್ನಲಾಗಿದೆ. ಕ್ಯಾಪ್‌, ಮಾಸ್ಕ್‌, ಜಾಕೆಟ್‌, ಕೈಗವಸು ಮುಂತಾದ ಪಿಪಿಇ ಸಲಕರಣೆಗಳನ್ನು ಧರಿಸಿದ ಕಳ್ಳರು, ಮಳಿಗೆಯ ಷೋಕೇಸ್‌ನಿಂದ ಚಿನ್ನಾಭರಣಗಳನ್ನು ತೆಗೆಯುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಂಗಡಿಯ ಗೋಡೆಗೆ ಕನ್ನ ಕೊರೆದು ಕಳ್ಳರು ಒಳನುಗ್ಗಿದ್ದಾರೆ ಎಂದು ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು