ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update | ಒಂದೇ ದಿನ 6.42 ಲಕ್ಷ ಜನರಿಗೆ ಕೋವಿಡ್–19 ಪರೀಕ್ಷೆ

ಮಹಾರಾಷ್ಟ್ರದಲ್ಲಿ 4 ಲಕ್ಷ ಜನರಿಗೆ ಸೋಂಕು
ಅಕ್ಷರ ಗಾತ್ರ

ನವದೆಹಲಿ:ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 6,42,588 ಜನರಿಗೆ ಕೋವಿಡ್–19 ಸೋಂಕು ಪರೀಕ್ಷೆ ನಡೆಸಿದ್ದು,ಇಲ್ಲಿಯವರೆಗೆ ಒಟ್ಟು 1,88,32,970 ಜನರ ಮಾದರಿ ಪರೀಕ್ಷೆ ನಡೆಸಲಾಗಿದೆಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಗುರುವಾರ ಒಂದೇ ದಿನ ಒಟ್ಟು55,079 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 779 ಸೋಂಕಿತರು ಮೃತಪಟ್ಟಿದ್ದಾರೆ.ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ16,38,871ಕ್ಕೆ ಏರಿಕೆಯಾಗಿದ್ದು,ಕೋವಿಡ್–19ನಿಂದಾಗಿ ಮೃತಪಟ್ಟವರ ಸಂಖ್ಯೆ35,747ಕ್ಕೆ ತಲುಪಿದೆ. 10,57,806 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಗುರುವಾರ ಸಂಜೆ 5ರ ವರೆಗೆ ಒಟ್ಟು 46,694 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 2,230 ಸೋಂಕಿತರು ಮೃತಪಟ್ಟಿದ್ದು, ಇನ್ನೂ 69,700 ಪ್ರಕರಣಗಳು ಸಕ್ರಿಯವಾಗಿವೆ.

ಮಹಾರಾಷ್ಟ್ರದಲ್ಲಿ 4 ಲಕ್ಷ ಜನರಿಗೆ ಸೋಂಕು
ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಇದುವರೆಗೆ 4,00,651 ಪ್ರಕರಣಗಳು ವರದಿಯಾಗಿದ್ದು, 2,39,755 ಮಂದಿ ಗುಣಮುಖರಾಗಿದ್ದಾರೆ. 14,463 ಸೋಂಕಿತರುಮೃತಪಟ್ಟಿದ್ದು, ಇನ್ನೂ 1,46,433 ಪ್ರಕರಣಗಳು ಸಕ್ರಿಯವಾಗಿವೆ.

ತಮಿಳುನಾಡಿನಲ್ಲಿ 2,34,114 ಜನರಿಗೆಸೋಂಕು ತಗುಲಿದೆ. ಇದುವರೆಗೆ 1,72,883 ಸೋಂಕಿತರು ಗುಣುಮುಖರಾಗಿದ್ದಾರೆ. 3,741 ಮಂದಿ ಸಾವಿಗೀಡಾಗಿದ್ದು, ಇನ್ನೂ 57,490 ಪ್ರಕರಣಗಳು ಸಕ್ರಿಯವಾಗಿವೆ.

ರಾಜಧಾನಿ ದೆಹಲಿಯಲ್ಲಿ1,33,310 ಮಂದಿಗೆಸೋಂಕು ತಗುಲಿದೆ. ಇದರಲ್ಲಿ1,18,633 ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನೂ10,770 ಪ್ರಕರಣಗಳು ಸಕ್ರಿಯವಾಗಿದ್ದು,3,907 ಸೋಂಕಿತರು ಮೃತಪಟ್ಟಿದ್ದಾರೆ. ಆಂಧ್ರ ಪ್ರದೇಶದಲ್ಲಿ1,20,390 ಪ್ರಕರಣಗಳು ವರದಿಯಾಗಿವೆ.55,406 ಸೋಂಕಿತರು ಗುಣುಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.63,771 ಪ್ರಕರಣಗಳು ಸಕ್ರಿಯವಾಗಿದ್ದು, 1,213 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT