ಶನಿವಾರ, ಜುಲೈ 31, 2021
25 °C

ಕೋವಿಡ್‌ನಿಂದ ಪಾರಾಗಲು ಚಿನ್ನದ ಮಾಸ್ಕ್ ಧರಿಸಿದ ಪುಣೆಯ ನಿವಾಸಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಪುಣೆ: ಮಹಾರಾಷ್ಟ್ರದ ಶಂಕರ್ ಕುರಾಡೆ ಎಂಬುವವರು ₹ 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ಧರಿಸುವ ಮೂಲಕ ಜನರ ಆಕರ್ಷಣೆಗೆ ಕಾರಣವಾಗಿದ್ದಾರೆ. 

ಪುಣೆ ಜಿಲ್ಲೆಯ ಪಿಂಪರಿ-ಚಿಂಚವಾಡ ನಿವಾಸಿಯಾಗಿರುವ ಶಂಕರ್‌ ಕುರಾಡೆ ಅವರು ವ್ಯಾಪಾರಿಯಾಗಿದ್ದು, ಚಿನ್ನದ ಆಭರಣಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. 

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ. ಆ ಹಿನ್ನೆಲೆಯಲ್ಲಿ ಚಿನ್ನದಿಂದ ಮಾಸ್ಕ್‌ ತಯಾರಿಸಿ, ಧರಿಸಿರುವುದಾಗಿ ಅವರು ಹೇಳಿದ್ದಾರೆ. 

'ತೆಳು ಪದರದಿಂದ ಕೂಡಿರುವ ಈ ಮಾಸ್ಕ್‌ ಐದು ರಂಧ್ರಗಳನ್ನು ಹೊಂದಿದೆ. ಆದ್ದರಿಂದ, ಉಸಿರಾಟಕ್ಕೆ ಯಾವುದೇ ರೀತಿಯ ತೊಂದರೆಯಿಲ್ಲ. ಈ ಚಿನ್ನದ ಮಾಸ್ಕ್‌ ಪರಿಣಾಮಕಾರಿಯೇ ಎಂಬುದು ನನಗೆ ಖಚಿತವಾಗಿ ತಿಳಿದಿಲ್ಲ' ಎಂದು ಅವರು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು