ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'128 ಪ್ರಶ್ನೆ ಉತ್ತರಿಸಿದೆ; ನನ್ನ 1 ಪ್ರಶ್ನೆಗೆ ಅವರು ಉತ್ತರಿಸಲಿಲ್ಲ'

Last Updated 3 ಜುಲೈ 2020, 10:49 IST
ಅಕ್ಷರ ಗಾತ್ರ

ನವದೆಹಲಿ: ‘ಗುಜರಾತ್‍ ಸರ್ಕಾರದಲ್ಲಿದ್ದ ಯಾವ ವ್ಯಕ್ತಿ ಸಂದೇಸರ ಗ್ರೂಪ್‍ಗೆ ನೆರವಾದರು ಎಂಬ ನನ್ನ ಒಂದೇ ಒಂದು ಪ್ರಶ್ನೆಗೆ ಉತ್ತರಿಸಲು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ವಿಫಲರಾದರು’ ಎಂದು ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ತಿಳಿಸಿದ್ದಾರೆ.

ಹಣದ ಅಕ್ರಮ ವರ್ಗಾವಣೆ ಆರೋಪ ಕುರಿತ ಸಂದೇಸರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈಚೆಗೆ ಅಹ್ಮದ್‍ ಪಟೇಲ್‍ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.

‘ನನಗೆ 128 ಪ್ರಶ್ನೆಗಳನ್ನು ಕೇಳಲಾಯಿತು. ಎಲ್ಲದಕ್ಕೂ ಉತ್ತರಿಸಿದ್ದೇನೆ. ತನಿಖೆ ನಡೆಸಲು ನನ್ನ ಮನೆಗೇ ಮೂರು ಬಾರಿ ಬಂದಿದ್ದಕ್ಕಾಗಿ ಅಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದೇನೆ’ ಎಂದು ಪಟೇಲ್‍ ಹೇಳಿದರು.

ಆದರೆ, ‘ಅಧಿಕಾರಿಗಳಿಗೆ ನನ್ನ ಮೂಲಭೂತವಾದ ಒಂದೇ ಒಂದು ಪ್ರಶ್ನೆಗೆ ಉತ್ತರಿಸಲಾಗಲಿಲ್ಲ. ಸಂದೇಸರ ಗ್ರೂಪ್‍ಗೆ ಹಲವಾರು ರೀತಿಯಲ್ಲಿ ಅನುಕೂಲ ಆಗುವಂತೆ ನೆರವಾದ ಗುಜರಾತ್ ಸರ್ಕಾರದಲ್ಲಿರುವ ವ್ಯಕ್ತಿ ಯಾರು ಎಂಬುದೇ ನನ್ನ ಪ್ರಶ‍್ನೆಯಾಗಿತ್ತು’ ಎಂದು ಅವರು ಟ್ವೀಟ್‍ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT