ಮಂಗಳವಾರ, ಜುಲೈ 27, 2021
21 °C

ಅಸ್ಸಾಂ: ಪ್ರವಾಹದಲ್ಲಿ ಸಿಲುಕಿ 76 ಪ್ರಾಣಿಗಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ಅಸ್ಸಾಂನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ನೀರಿನಲ್ಲಿ ಸಿಲುಕಿ ಕಾಜಿರಂಗ ರಾಷ್ಟ್ರೀಯ ಉದ್ಯಾನದ ನಾಲ್ಕು ಖಡ್ಗಮೃಗ ಸೇರಿದಂತೆ ಒಟ್ಟು 76 ಪ್ರಾಣಿಗಳು ಮೃತಪಟ್ಟಿವೆ.

18 ಜಿಂಕೆ ಸೇರಿದಂತೆ 31 ಪ್ರಾಣಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. 12 ಪ್ರಾಣಿಗಳು ಗಾಬರಿಗೊಂಡು ಉದ್ಯಾನದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 37 ಅನ್ನು ದಾಟುತ್ತಿದ್ದಾಗ ವಾಹನಗಳು ಡಿಕ್ಕಿ ಹೊಡೆದು ಸಾವನ್ನಪ್ಪಿವೆ ಎಂದು ಕಾಜಿರಂಗ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ತಿಳಿಸಿದರು.

ಕಾಜಿರಂಗ ರಾಷ್ಟ್ರೀಯ ಉದ್ಯಾನವು ಈಗಾಗಲೇ ಶೇ 90ರಷ್ಟು ಜಲಾವೃತಗೊಂಡಿದೆ. ಪ್ರಾಣ ರಕ್ಷಣೆಗಾಗಿ ಉದ್ಯಾನದಿಂದ ಬಡೊರ್ಡೊಬಿ ಗ್ರಾಮಕ್ಕೆ ಬಂದಿದ್ದ ’ರಾಯಲ್‌ ಬೆಂಗಾಳ್’‌ ಹುಲಿಯೊಂದನ್ನು ಸೆರೆ ಹಿಡಿದು ವನ್ಯಜೀವಿ ಪುನರ್ವಸತಿ ಮತ್ತು ಸಂರಕ್ಷಣೆ ಕೇಂದ್ರಕ್ಕೆ ತಲು‍ಪಿಸಲಾಗಿದೆ. ಅಲ್ಲದೆ 24 ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಖಡ್ಗಮೃಗದ ಮರಿಯನ್ನು ರಕ್ಷಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ ಪ್ರವಾಹದಲ್ಲಿ ಸಿಲುಕಿ ಇಬ್ಬರು ಮೃತಪಟ್ಟಿದ್ದು ಇದುವರೆಗೆ ಸತ್ತವರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ ಎಂದು ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು