ಬುಧವಾರ, ಆಗಸ್ಟ್ 4, 2021
23 °C

ಮುಂಬೈನಲ್ಲಿ ಭಾರಿ ಮಳೆ, ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ, 2ದಿನ ಆರೆಂಜ್ ಅಲರ್ಟ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮುಂಬೈ (ಮಹಾರಾಷ್ಟ್ರ): ನಗರದಲ್ಲಿ ಶುಕ್ರವಾರ ಭಾರಿ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂದಿನ ಎರಡು ದಿನಗಳ ಕಾಲ ಮಹಾರಾಷ್ಟ್ರ ಸರ್ಕಾರ ಆರೆಂಜ್ ಅಲರ್ಟ್ ಘೋಷಿಸಿದೆ.

ಮಹಾರಾಷ್ಟ್ರಕ್ಕೆ ಮುಂಗಾರು ಪ್ರವೇಶಿಸಿದ್ದು ಬೆಳಗ್ಗೆಯಿಂದಲೇ ಮಳೆ ಬೀಳಲು ಆರಂಭಿಸಿತ್ತು. ಮಧ್ಯಾಹ್ನದ ನಂತರ ಭಾರಿ ಮಳೆಯಾದ ಕಾರಣ ಮುಂಬೈ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೆಲ ತಗ್ಗುಪ್ರದೇಶಗಳಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. 

ಪಾಲಿಕೆ ಸಿಬ್ಬಂದಿ ಸುಮಾರು 300ಕ್ಕೂ ಹೆಚ್ಚು ಮೋಟಾರ್ ಪಂಪ್‌ಗಳನ್ನು ಬಳಸಿ ವಿವಿಧ ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗಿರುವ ನೀರನ್ನು ಹೊರತೆಗೆದಿದ್ದಾರೆ.


ಮುಂಬೈನಗರದಲ್ಲಿ ಬೇರೆ ಸ್ಥಳಗಳಿಗೆ ಹೊರಡಲು ಮನೆಯಿಂದ ಹೊರಟವರು ಮಳೆಯಿಂದಾಗಿ ಬಸ್ ನಿಲ್ದಾಣದಲ್ಲಿಯೇ ಸಿಲುಕಿರುವುದು

ನಗರದ ಪ್ರಮುಖ ಪ್ರದೇಶಗಳಾದ ಗಾಂಧಿ ಮಾರ್ಕೆಟ್, ಅಂದೇರಿ, ಕೊಲಬಾ, ಕುರ್ಲಾ, ಸಿಯಾನ್, ಹಿಂದ್ ಮಾತಾ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಂದೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ವಿವಿಧ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದಾರೆ.

ಕೊರೊನಾದಿಂದ ಸಮಸ್ಯೆಗೆ ಸಿಲುಕಿರುವ ಮುಂಬೈ ನಗರಕ್ಕೆ ಮಳೆ ಮತ್ತೊಂದು ಅವಾಂತರ ಸೃಷ್ಟಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು