ಗುರುವಾರ , ಸೆಪ್ಟೆಂಬರ್ 24, 2020
24 °C

ವಾಷಿಂಗ್ಟನ್‌: ಚಾಕುವಿನಿಂದ ಇರಿದು ಕೇರಳದ ನರ್ಸ್‌ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಇಲ್ಲಿನ ಆಸ್ಪತ್ರೆಯೊಂದರ ಆವರಣದಲ್ಲಿ ಭಾರತೀಯ ಮೂಲದ ನರ್ಸ್‌ ಒಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ದಕ್ಷಿಣ ಫ್ಲೋರಿಡಾದ ಪೊಲೀಸರು ತಿಳಿಸಿದ್ದಾರೆ.

‘ಕೇರಳದ ಮೆರಿನ್‌ ಜಾಯ್‌(26) ಅವರು ಮಂಗಳವಾರ‌ ಕೋರಲ್ ಸ್ಪ್ರಿಂಗ್ಸ್ ಆಸ್ಪತ್ರೆಯಿಂದ ಹೊರನಡೆಯುತ್ತಿದ್ದಾಗ ವ್ಯಕ್ತಿಯೊಬ್ಬರು ಮೆರಿನ್‌ ಅವರನ್ನು ತನ್ನ ಬಳಿಗೆ ಎಳೆದು ಹಲವು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಇತರರು ನರ್ಸ್‌ ಸಹಾಯಕ್ಕೆ ಬರುವಷ್ಟರಲ್ಲಿ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ’ ಎಂದು ಕೋರಲ್ ಸ್ಪ್ರಿಂಗ್ಸ್ ಪೊಲೀಸ್ ಉಪ ಮುಖ್ಯಸ್ಥ ಬ್ರಾಡ್ ಮೆಕ್‌ಕೀನ್ ತಿಳಿಸಿದರು.

ಮೆರಿನ್‌ ಜಾಯ್ ‌ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಕೊನೆ ಉಸಿರೆಳೆದರು ಎಂದು ಅವರು ಹೇಳಿದರು.

ಕೃತ್ಯ ಎಸಗಿದ ಆರೋಪಿ ಫಿಲಿಪ್‌ ಮ್ಯಾಥ್ಯೂ ಅವರನ್ನು ಬಂಧಿಸಲಾಗಿದೆ. ಮೆರಿನ್‌ ಜಾಯ್‌ ಮತ್ತು ಮ್ಯಾಥ್ಯೂ ನಡುವಿನ ಕುಟುಂಬ ಸಂಬಂಧಿತ ವಿವಾದ ಮೆರಿನ್‌ ಹತ್ಯೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು