ಭಾನುವಾರ, ಆಗಸ್ಟ್ 1, 2021
27 °C

ನಾಯಿ ಮಾಂಸ ಮಾರಾಟ, ಬಳಕೆ ನಿಷೇಧಿಸಿದ ನಾಗಾಲ್ಯಾಂಡ್ ಸಚಿವ ಸಂಪುಟ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಹಿಮಾ: ಪ್ರಾಣಿಗಳ ಹಿಂಸೆ ಸಂಬಂಧ ಕಳವಳ ವ್ಯಕ್ತವಾಗುತ್ತಿರುವುದನ್ನು ಪರಗಣಿಸಿ, ನಾಯಿಗಳ ಮಾಂಸ ಮಾರಾಟ ಹಾಗೂ ಬಳಕೆಯನ್ನು ನಾಗಾಲ್ಯಾಂಡ್‌ ಸಚಿವ ಸಂಪುಟ ನಿಷೇಧಿಸಿದೆ.

ಸಚಿವ ಸಂಪುಟ ಸಭೆಯಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ನಾಯಿಗಳನ್ನು ಆಮದು ಮಾಡಿಕೊಳ್ಳುವುದು ಮತ್ತು ಅವುಗಳ ಮಾಂಸ (ಹಸಿ ಹಾಗೂ ಬೇಯಿಸಿದ ಮಾಂಸ) ಮಾರಾಟವನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ನೈಬಾ ಕ್ರೋನು ಹೇಳಿದ್ದಾರೆ.

ಹೊರ ರಾಜ್ಯಗಳಿಂದ ನಾಯಿಗಳನ್ನು ಆಮದು ಮಾಡಿಕೊಳ್ಳುವುದು ಅಪಾಯಕಾರಿ ಎಂದು ಪರಿಗಣಿಸಿ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ–1960 ಪ್ರಕಾರ ರಾಜ್ಯ ಸಚಿವ ಸಂಪುಟ ಈ ತೀರ್ಮಾನ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಅದೇ ರೀತಿ, ರಾಜ್ಯದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಂದಿಗಳ ಆಮದು ಮತ್ತು ಮಾರಾಟವನ್ನೂ ನಿರ್ಬಂಧಿಸಲಾಗಿದೆ.

ಈ ಭಾಗದಲ್ಲಿ ಹಂದಿ ಜ್ವರ ಹರಡಿದ ಹಿನ್ನಲೆಯಲ್ಲಿ ರಾಜ್ಯವು ಈಗಾಗಲೇ ಹಂದಿಗಳ ಆಮದನ್ನು ನಿಷೇಧಿಸಿದೆ. ಅದಕ್ಕೆ ಸಂಪುಟದ ಅನುಮೋದನೆಯೂ ದೊರೆತಿದೆ ಎಂದು ಕ್ರೋನು ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರವು ನಾಯಿಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲು ನಿರ್ಧರಿಸಿದೆ. ನಾಯಿಗಳ ಮಾಂಸ ಮಾರಾಟ ಮಾಡುವುದು ಹಾಗೂ ಡಾಗ್‌ ಮಾರ್ಕೆಟ್‌ಗಳನ್ನು ನಿಷೇಧಿಸಲು ತೀರ್ಮಾನಿಸಿದೆ. ವಿವೇಚನೆಯಿಂದ ಕೂಡಿದ ಈ ನಿರ್ಧಾರ ಕೈಗೊಂಡಿದ್ದಕ್ಕೆ ಸರ್ಕಾರದ ಸಚಿವ ಸಂಪುಟವನ್ನು ಶ್ಲಾಘಿಸುತ್ತೇನೆ’ ಎಂದು ಮುಖ್ಯ ಕಾರ್ಯದರ್ಶಿ ತೆಮ್‌ಜೆನ್‌ ಟಾಯ್‌ ಟ್ವೀಟ್‌ ಮಾಡಿದ್ದಾರೆ.

ಇದೊಂದು ಐತಿಹಾಸಿಕ ನಿರ್ಧಾರವೆಂದು ಪ್ರಾಣಿ ದಯಾ ಸಂಘಟನೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು