ಗುರುವಾರ , ಆಗಸ್ಟ್ 5, 2021
21 °C

ದೇವಿಂದರ್‌‌ ಸಿಂಗ್‌ ಸೇರಿ 6 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಮ್ಮು: ಭಯೋತ್ಪಾದಕ ಚಟುವಟಿಕೆಯ ಆರೋಪ ಸಂಬಂಧ, ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ದೇವಿಂದರ್‌ ಸಿಂಗ್‌ ಸೇರಿದಂತೆ ಆರು ಮಂದಿಯ ವಿರುದ್ಧ ರಾಷ್ಟ್ರೀಯ ತನಿಖಾ ದಳ ಸೋಮವಾರ ದೋಷಾರೋಪ ಪಟ್ಟಿ ದಾಖಲಿಸಿದೆ. 

ಸಿಂಗ್‌ ಜೊತೆಗೆ ನಿಷೇಧಿತ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ‌ ಕಮಾಂಡರ್‌ ಸೈಯದ್‌ ನವೀದ್ ಮುಷ್ತಾಕ್‌ ಅಲಿಯಾಸ್‌ ನವೀದ್ ಬಾಬು ಮತ್ತು ಇದೇ ಸಂಘಟನೆಯ ಇರ್ಫಾನ್‌ ಶಫಿ ಮಿತ್‌, ರಫಿ ಅಹ್ಮದ್‌ ರಾಥರ್‌ ಮತ್ತು ವ್ಯಾಪಾರಿ ತನ್ವೀರ್‌ ಅಹ್ಮದ್‌ ವಾನಿ, ನವೀದ್‌ ಬಾಬು ಸಹೋದರ ಸೈಯದ್‌ ಇರ್ಫಾನ್‌ ಅಹ್ಮದ್‌ ಹೆಸರೂ ಆರೋಪ ಪಟ್ಟಿಯಲ್ಲಿದೆ.  

ಪಾಕಿಸ್ತಾನದ ಹೈಕಮಿಷನ್‌ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಕಳೆದ ಜನವರಿಯಲ್ಲಿ ಸಿಂಗ್‌ ಅವರನ್ನು ಬಂಧಿಸಲಾಗಿತ್ತು. 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು