ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಸ್ವಾತಂತ್ರ್ಯ ಪಡೆಯಲು ಸಂಕಲ್ಪ ಮಾಡಿ: ಮನ್‌ ಕಿ ಬಾತ್‌ನಲ್ಲಿ ಮೋದಿ

Last Updated 26 ಜುಲೈ 2020, 6:43 IST
ಅಕ್ಷರ ಗಾತ್ರ

ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.

‘21 ವರ್ಷಗಳ ಹಿಂದೆ ಈ ದಿನ ನಮ್ಮ ಸೈನ್ಯವು ಕಾರ್ಗಿಲ್ ಯುದ್ಧವನ್ನು ಗೆದ್ದಿತು. ಆಗ ಭಾರತ ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಲು ಪ್ರಯತ್ನಿಸುತ್ತಿತ್ತು. ಆದರೆ, ಒಂದು ಮಾತಿದೆ, ವಿನಾ ಕಾರಣ ಎಲ್ಲರೊಂದಿಗೂ ದ್ವೇಷ ಸಾಧಿಸುವುದು ದುಷ್ಟರ ಸ್ವಭಾವ ಎಂದು...,’ ಹೀಗೆ ಹೇಳುವ ಮೂಲಕವಿಜಯ್‌ ದಿವಸ್‌ ನೆನೆಯುತ್ತಲೇ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಚಾಟಿ ಬೀಸಿದರು.

ಭಾರತದ ಭೂಮಿಯನ್ನು ವಶಪಡಿಸಿಕೊಳ್ಳಲು ಮತ್ತು ಅದರ ಆಂತರಿಕ ಸಂಘರ್ಷದಿಂದ ಅಲ್ಲಿನ ಜನರ ದೃಷ್ಟಿಯನ್ನು ಬೇರೆ ಕಡೆಗೆ ಸೆಳೆಯುವ ತಂತ್ರದ ಭಾಗವಾಗಿ ಪಾಕಿಸ್ತಾನ ದೃಷ್ಕೃತ್ಯ ಎಸಗಿತ್ತು ಎಂದೂ ಮೋದಿ ಹೇಳಿದರು.

ಇಂದು, ಭಾರತದಲ್ಲಿ ಕೋವಿಡ್‌ ಕಾಯಿಲೆಯಿಂದಚೇತರಿಸಿಕೊಳ್ಳುತ್ತಿರುವವರ ಪ್ರಮಾಣವೂಬೇರೆ ದೇಶಗಳಿಗಿಂತಲೂ ಉತ್ತಮವಾಗಿದೆ. ದೇಶದಲ್ಲಿ ಸಾವಿನ ಪ್ರಮಾಣ ಇತರ ದೇಶಗಳಿಗೆ ಹೋಲಿಸಿದರೆ ತೀರಾ ಕಡಿಮೆ ಇದೆ. ನಾವು ಜನರ ಪ್ರಾಣ ಉಳಿಸಲು ಸಮರ್ಥರಾಗಿದ್ದೇವೆ. ಆದರೆ ಕೊರೊನಾ ವೈರಸ್ ಒಡ್ಡಿರುವಬೆದರಿಕೆ ಇನ್ನೂ ಮುಗಿದಿಲ್ಲ. ಇದು ಅನೇಕ ಪ್ರದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ನಾವು ಜಾಗರೂಕರಾಗಿರಬೇಕು ಎಂದು ಮೋದಿ ಮನ್‌ ಕೀ ಬಾತ್‌ನಲ್ಲಿ ದೇಶದ ನಾಗರಿಕರನ್ನು ಎಚ್ಚರಿಸಿದ್ದಾರೆ.

ಜಮ್ಮುವಿನ ಟ್ರೆವಾ ಎಂಬಲ್ಲಿನ ಸರಪಂಚರಾದ ಬಲ್ಬೀರ್‌ ಕೌರ್‌ ಎಂಬುವವರು ತಮ್ಮ ಪಂಚಾಯಿತಿಯಲ್ಲಿ 30 ಹಾಸಿಗೆಗಳ ಕ್ವಾರಂಟೈನ ಬೆಡ್‌ಗಳನ್ನು ನಿರ್ಮಿಸಿದ್ದಾರೆ. ಗ್ಯಾಂಡರ್‌ಬಾಲ್‌ನ ಚೌಂಟ್ಲಿವಾರ್‌ನ ಜೈತುನಾ ಬೇಗಂ ತಮ್ಮ ಪಂಚಾಯಿತಿ ಕೋವಿಡ್‌ ವಿರುದ್ಧ ಹೋರಾಡಲಿದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಘೋಷಿಸಿದ್ದಾರೆ ಎಂದು ಹೇಳಿದ ಮೋದಿ, ತಮ್ಮ ಕಾರ್ಯಕ್ರಮದಲ್ಲಿ ಅವರ ಕೈಂಕರ್ಯಗಳನ್ನು ಸ್ಮರಿಸಿದರು.

‘ಜಮ್ಮು ಕಾಶ್ಮೀರದಅನಂತನಾಗ್‌ಪುರಸಭೆ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್ ಕೇವಲ 50,000 ರೂ ವೆಚ್ಚದಲ್ಲಿ ಸೋಂಕು ನಿವಾರಕ ದ್ರಾವಣಸಿಂಪಡಿಸುವ ಯಂತ್ರವನ್ನು ಸಿದ್ಧಪಡಿಸಿದ್ದಾರೆ. ಇಡೀ ದೇಶದಲ್ಲಿ ಇಂಥ ಅನೇಕ ಸ್ಪೂರ್ತಿದಾಯಕ ಕತೆಗಳಿವೆ,’ ಎಂದು ಮೋದಿ ಹೇಳಿದರು.

ಈ ಬಾರಿಯರಕ್ಷಾ ಬಂಧನವನ್ನು ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಲು ಜನತೆ ಸಿದ್ಧತೆ ಕೈಗೊಂಡಿರುವುದು ಮತ್ತು ಅದನ್ನು ತಮ್ಮ ‘ಲೋಕಲ್‌ ಫಾರ್‌ ಓಕಲ್‌’ ಘೋಷಣೆಗೆ ಬೆಸೆಯುತ್ತಿರುವುದಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹಬ್ಬದ ಸಂತೋಷವು ನಮ್ಮ ಸಮಾಜದಲ್ಲಿ ವ್ಯವಹಾರ ವಿಸ್ತರಿಸಲು ಸಹಾಯ ಮಾಡುತ್ತದೆ. ಅದು ಅವರಿಗೂ ಸಂತೋಷದಾಯಕ ಹಬ್ಬವಾಗಿಸಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಪಟ್ಟಿದ್ದಾರೆ.

ಕ್ರೀಡೆ ಅಥವಾ ಇತರೆ ಯಾವುದೇಕ್ಷೇತ್ರಗಳಿರಲಿ ದೊಡ್ಡ ನಗರ, ಪ್ರಸಿದ್ಧ ಕುಟುಂಬ ಅಥವಾ ಪ್ರಸಿದ್ಧ ಶಾಲೆ/ ಕಾಲೇಜುಗಳಿಂದ ಬಂದವರೇ ಹೆಚ್ಚಾಗಿ ಕಾಣುತ್ತಿದ್ದರು.ಆದರೆ, ಕಾಲ ಬದಲಾಗಿದೆ. ಹಳ್ಳಿಗಳು, ಸಣ್ಣ ಪಟ್ಟಣಗಳು ಮತ್ತು ಸಾಮಾನ್ಯ ಕುಟುಂಬಗಳಯುವಕರು ಈಗಮುಂದೆ ಬರುತ್ತಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.

‌ಕೊರೊನಾ ವೈರಸ್‌ನಿಂದ ಆಗಸ್ಟ್‌ 15ರಂದು ಸ್ವಾತಂತ್ರ ಪಡೆಯಲು ಭಾರತೀಯರು ಸಂಕಲ್ಪ ಮಾಡಬೇಕು. ಆತ್ಮನಿರ್ಭರ ಭಾರತ ಸಾಧಿಸಲು. ಹೊಸದನ್ನು ಕಲಿಯಲು, ಹೊಸದನ್ನು ತಿಳಿಸಲು ನಮ್ಮ ಕರ್ತವ್ಯಗಳಿಗೆ ನಾವು ಬದ್ಧರಾಗಿರಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT