ಬುಧವಾರ, ಆಗಸ್ಟ್ 4, 2021
22 °C

ಗೂಗಲ್ ಸಿಇಒ ಸುಂದರ್‌ ಪಿಚೈ ಜತೆ ಪ್ರಧಾನಿ ನರೇಂದ್ರ ಮೋದಿ ಸಂವಾದ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಗೂಗಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್‌ ಪಿಚೈ ಜತೆ ವರ್ಚುವಲ್‌ ಸಂವಾದ ನಡೆಸಿದರು.

ಭಾರತೀಯ ರೈತರು ಹಾಗೂ ಯುವ ಸಮುದಾಯದ ಬದುಕನ್ನು ಬದಲಿಸಲು ತಂತ್ರಜ್ಞಾನದ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸಾಧ್ಯತೆಯ ಬಗ್ಗೆ ಇವರು ಚರ್ಚಿಸಿದ್ದಾರೆ.

ಈ ಸಂವಾದದ ಚಿತ್ರವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪ್ರಧಾನಿ, ‘ಇಂದು ಮುಂಜಾನೆ ಪಿಚೈ ಜತೆಗೆ ಅತ್ಯಂತ ಫಲಪ್ರದವಾದ ಸಂವಾದ ನಡೆಸಿದೆ. ಹಲವು ವಿಚಾರಗಳ ಬಗ್ಗೆ ನಾವು ವಿಸ್ತೃತ ಚರ್ಚೆ ನಡೆಸಿದೆವು’ ಎಂದು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು