ನವದೆಹಲಿ: ರೈಲು ಸಂಚಾರ ಸೇವೆಗೆ ಖಾಸಗಿಯವರಿಗೂ ಅನುಮತಿ ನೀಡುತ್ತಿರುವ ರೈಲ್ವೆ ಇಲಾಖೆ, ಈ ಉದ್ದೇಶಕ್ಕಾಗಿ ಕರ್ನಾಟಕದಲ್ಲಿ 14 ಪ್ರಮುಖ ಮಾರ್ಗಗಳನ್ನು ಗುರುತಿಸಿದೆ.

ಬೆಂಗಳೂರು–ಪಟ್ನಾ, ಬೆಂಗಳೂರು– ಗೋರಖ್ಪುರ, ಬೆಂಗಳೂರು– ಪ್ರಯಾಗರಾಜ್, ಬೆಂಗಳೂರು– ವಿಶಾಖಪಟ್ಟಣಂ, ಬೆಂಗಳೂರು– ಜೈಪುರ, ಚೆನ್ನೈ–ಮಂಗಳೂರು, ಗುವಾಹಟಿ–ಬೆಂಗಳೂರು, ಮೈಸೂರು– ಗುವಾಹಟಿ, ಮೈಸೂರು– ಭುವನೇಶ್ವರ, ಬೆಂಗಳೂರು– ದೆಹಲಿ, ಬೆಂಗಳೂರು– ಹೌರಾ, ರಾಂಚಿ–ಬೆಂಗಳೂರು, ಕಲಬುರ್ಗಿ–ಮುಂಬೈ ಹಾಗೂ ಮಂಗಳೂರು– ಮೈಸೂರು ಮಾರ್ಗಗಳನ್ನು ಇಲಾಖೆ ಗುರುತಿಸಿದೆ.

ಈ ಮಾರ್ಗಗಳಲ್ಲಿ ಈಗಾಗಲೇ ರೈಲುಗಳ ಸಂಚರಿಸುತ್ತಿವೆ. ಹೆಚ್ಚುವರಿಯಾಗಿ ಈ ಮಾರ್ಗಗಳಲ್ಲಿ ರೈಲು ಸೇವೆ ಒದಗಿಸಲು ಖಾಸಗಿಯವರಿಗೆ ಅವಕಾಶ ನೀಡಲಾಗುತ್ತದೆ ಎಂದು ಭಾರತೀಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಾಸಗಿಯವರು ಮೇಕ್ ಇನ್ ಇಂಡಿಯಾ ನೀತಿಯಡಿಯೇ ಕೋಚ್ಗಳನ್ನು ಖರೀದಿ ಮಾಡಬೇಕು. ಗರಿಷ್ಠ ವೇಗ ಗಂಟೆಗೆ 160 ಕಿ.ಮೀ. ಇರುವಂತೆ ರೈಲುಗಳ ವಿನ್ಯಾಸ ಇರಬೇಕು ಎಂಬ ಷರತ್ತು ವಿಧಿಸಲಾಗುವುದು ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ತಿಳಿಸಿದ್ದಾರೆ.

ಇಂಡಿಗೊ, ವಿಸ್ತಾರ, ಸ್ಪೈಸ್ ಜೆಟ್, ಆರ್.ಕೆ.ಕೆಟರಿಂಗ್, ಮೇಕ್ ಮೈಟ್ರಿಪ್ ಸೇರಿದಂತೆ ಹಲವು ಕಂಪನಿಗಳು ರೈಲುಗಳ ಸೇವೆ ಒದಗಿಸಲು ಆಸಕ್ತಿ ವ್ಯಕ್ತಪಡಿಸಿವೆ. ಖಾಸಗಿ ರೈಲುಗಳ ಸಂಚಾರವನ್ನು 2023ರ ಏಪ್ರಿಲ್ನಲ್ಲಿ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.