ನವದೆಹಲಿ: ಕೋವಿಡ್-19 ಅವಧಿಯ ನಂತರವು ಸುರಕ್ಷಿತ ಪ್ರಯಾಣಕ್ಕೆ ಒತ್ತು ನೀಡಲು ರೈಲ್ವೆ ಇಲಾಖೆಯು, ಕೈ ಬದಲಾಗಿ ಕಾಲಿನಲ್ಲಿಯೇ ನಿರ್ವಹಿಸಬಹುದಾದ ಹಲವು ನೂತನ ಸೌಲಭ್ಯಗಳನ್ನು ಒಳಗೊಂಡ ಬೋಗಿಗಳನ್ನು ಪರಿಚಯಿಸಲಿದೆ.

ಕಾಲಿನಲ್ಲೇ ನಿರ್ವಹಣೆ ಮಾಡಬಹುದಾದ ಸೋಪ್ ಡಿಸ್ಪೆನ್ಸರ್, ಶೌಚಾಲಯದ ಫ್ಲಶ್, ಸೂಕ್ಷ್ಮಜೀವಿ ನಿರೋಧ ಕಾಪರ್ ಲೇಪಿತ ಹ್ಯಾಂಡಲ್‍ಗಳ ಬಳಕೆಯೂ ಸೇರಿ ಹಲವು ಸೌಲಭ್ಯಗಳನ್ನು ಈ ನೂತನ ಬೋಗಿಗಳಲ್ಲಿ ಅಳವಡಿಸಲಿದೆ.

ಹೊಸ ಸೌಲಭ್ಯಗಳಿರುವ ಎರಡು ಬೋಗಿಗಳನ್ನು ಕಾಪುರ್ತಲದಲ್ಲಿ ಇರುವ ರೈಲ್ವೆ ಕೋಚ್ ಫ‍್ಯಾಕ್ಟರಿ ರೂಪಿಸಿದೆ. ಬೋಗಿ ಒಳಾವರಣದ ಶುದ್ಧತೆಗೆ ಎ.ಸಿ ಘಟಕಗಳಲ್ಲಿ ಪ್ಲಾಸ್ಮಾ ಏರ್ ಈಕ್ವಿಪ್‍ಮೆಂಟ್ ಅಳವಡಿಸಲಾಗುವುದು ಎಂದು ತಿಳಿಸಿದೆ.

ಕೋವಿಡ್ ಸ್ಥಿತಿ ಎದುರಿಸಲು ಇಲಾಖೆ ಸನ್ನದ್ಧವಾಗಿದೆ. ನೂತನ ಬೋಗಿಯಲ್ಲಿ ಕೈ ಸಂಪರ್ಕಕ್ಕೆ ಬಾರದೇ ಬಳಸಬಹುದಾದ ಅನೇಕ ಸೌಲಭ್ಯಗಳನ್ನು ಅಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಕೋವಿಡ್ ಮುಕ್ತ ಪ್ರಯಾಣಕ್ಕಾಗಿ’ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು ಟ್ವೀಟ್ ಮಾಡಿದ್ದಾರೆ.

ಕಾಲಿನಲ್ಲಿ ನಿರ್ವಹಿಸಬಹುದಾದ ನಲ್ಲಿಗಳು, ಶೌಚಾಲಯದ ಬಾಗಿಲು, ಫ್ಲಶ್ ಹಿಡಿಗಳು, ಬಾಗಿಲ ಹಿಡಿಕೆ ಸೌಲಭ್ಯಗಳಲ್ಲಿ ಸೇರಿವೆ. ವಾಶ್ ಬೇಸಿನ್ ಅನ್ನು ಕಾಲಿನಲ್ಲಿಯೇ ನಿರ್ವಹಿಸಬಹುದು ಎಂದು ಇಲಾಖೆಯು ಈ ಕುರಿತ ಕೈಪಿಡಿಯಲ್ಲಿ ತಿಳಿಸಿದೆ.

ಮುಖ್ಯವಾಗಿ ಟೈಟಾನಿಯಂ ಡೈಆಕ್ಸೈಡ್ ಕೋಟಿಂಗ್ ಇರುವುದು ಈ ಬೋಗಿಯ ವಿಶೇಷ. ಈ ಕೋಟಿಂಗ್ ಸೋಂಕು, ಬ್ಯಾಕ್ಟಿರಿಯಾ ನಿರೋಧಕವಾಗಿದ್ದು, ಪಾಚಿ ಕಟ್ಟುವುದಿಲ್ಲ. ಜೊತೆಗೆ ಒಳಾವರಣದಲ್ಲಿ ಗಾಳಿಯ ಶುದ್ಧತೆಗೂ ಕಾರಣವಾಗಲಿದೆ. ಈ ಕೋಟಿಂಗ್ 12 ತಿಂಗಳು ಬಾಳಿಕೆ ಬರಲಿದೆ ಎಂದು ಇಲಾಖೆಯು ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.