ಸೋಮವಾರ, ಜುಲೈ 26, 2021
24 °C
ಅಗಲಿದ ನಾಯಕನಿಗೆ ಗಣ್ಯರಿಂದ ಅಂತಿಮ ನಮನ

ದೆಹಲಿಯಲ್ಲಿ ಅಮರ್‌ಸಿಂಗ್‌ ಅಂತ್ಯಕ್ರಿಯೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇತ್ತೀಚೆಗೆ ನಿಧನರಾದ ಸಮಾಜವಾದಿ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯ ಅಮರ್‌ ಸಿಂಗ್ ಅವರ ಅಂತ್ಯಕ್ರಿಯೆ ಇಲ್ಲಿನ ಛಾತರ್‌ಪುರ್‌ ಚಿತಾಗಾರದಲ್ಲಿ ಸೋಮವಾರ ಕುಟುಂಬದವರು, ಬಂಧುಬಾಂಧವರ ಸಮ್ಮುಖದಲ್ಲಿ ನೆರವೇರಿತು.

ಸಿಂಗ್ ಅವರ ಇಬ್ಬರು ಪುತ್ರಿಯರು ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಿದರು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ, ಸರ್ಕಾರದ ನಿಯಮದ ಪ್ರಕಾರ ಅಂತ್ಯಕ್ರಿಯೆ ಸಂದರ್ಭದಲ್ಲಿ ನಟಿ, ರಾಜಕಾರಣಿ ಜಯಪ್ರದಾ ಸೇರಿದಂತೆ ಕಡಿಮೆ ಸಂಖ್ಯೆಯಲ್ಲಿ ಸಿಂಗ್‌ ಆಪ್ತವಲಯದವರು ಪಾಲ್ಗೊಂಡಿದ್ದರು.

ಭಾನುವಾರ ಸಂಜೆ, ಅಮರಸಿಂಗ್ ಅವರ ಪಾರ್ಥಿವ ಶರೀರವನ್ನು ಖಾಸಗಿ ವಿಮಾನದ ಮೂಲಕ  ನವದೆಹಲಿಯಲ್ಲಿನ ಸಿಂಗ್‌ ಅವರ ಛಾತರ್‌ಪುರ್ ಫಾರ್ಮ್‌ಹೌಸ್‌ಗೆ ತರಲಾಗಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್‌, ಬಿಜೆಪಿ ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ, ರಾಜ್ಯಸಭಾ ಮಾಜಿ ಸದಸ್ಯ ಜಯಪ್ರದಾ ಮತ್ತಿತರರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದ್ದರು.

ಇದನ್ನು ಓದಿ: ಅಮರ್ ಸಿಂಗ್ | ಹೀಗೆ ಸಾಗಿ ಬಂತು ವರ್ಣರಂಜಿತ ರಾಜಕಾರಣಿಯ ಬದುಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು