ಶನಿವಾರ, ಜೂನ್ 19, 2021
22 °C

ಪರೋಲ್‍ ಕೋರಿದ್ದ ರಾಮ್‍ಪಾಲ್‍ ಅರ್ಜಿ ವಜಾಗೊಳಿಸಿದ 'ಸುಪ್ರೀಂ'

ಪಿಟಿಐ: Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹರಿಯಾಣದ ಸ್ವಯಂಘೋಷಿತ ದೇವಮಾನವ, ಸದ್ಯ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ರಾಮ್‍ಪಾಲ್‍ರಿಗೆ ಪರೋಲ್‍ ಮಂಜೂರು ಮಾಡಲು ಸುಪ್ರಿಂ ಕೋರ್ಟ್ ಮಂಗಳವಾರ ನಿರಾಕರಿಸಿತು.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ನ್ಯಾಯಪೀಠ ಈ ಕುರಿತ ಅರ್ಜಿಯನ್ನು ವಜಾಮಾಡಿತು. ಬುಧವಾರ ನಿಗದಿಯಾಗಿರುವ ಮೊಮ್ಮಗಳ ಮದುವೆಗೆ ಹಾಜರಾಗಲು ಪರೋಲ್‍ ಮೇಲೆ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ಕೊಲೆ ಪ್ರಕರಣ ಸಂಬಂಧ ರಾಮ್‍ಪಾಲ್‍ ಮತ್ತು ಅವರ 13 ಬೆಂಬಲಿಗರು 2018ರ ಅಕ್ಟೋಬರ್ 17ರಂದು ಜೀವಾವಧಿ ಸಜೆಗೆ ಗುರಿಯಾಗಿದ್ದರು. ನವೆಂಬರ್ 19, 2014ರಂದು ರಾಮ್‍ಪಾಲ್ ಆಶ್ರಮದಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಅದೇ ದಿನ ರಾಮ್‍ಪಾಲ್‍ ಅವರನ್ನು ಬಂಧಿಸಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು