ಶ್ರೀನಗರ: ಜಮ್ಮು ಮತ್ತುಕಾಶ್ಮೀರದಲ್ಲಿ ಗುರುವಾರ ಕೋವಿಡ್‌ಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಕಣಿವೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 150ಕ್ಕೆ ತಲುಪಿದೆ. ಬಾರಾಮುಲ್ಲಾದ 60 ವರ್ಷ ಮಹಿಳೆ ಮತ್ತು ಶ್ರೀನಗರ ನಿವಾಸಿ 80 ವರ್ಷದ ವೃದ್ಧೆ ಗುರುವಾರ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

‘ ಬಾರಾಮುಲ್ಲಾದ ಮಹಿಳೆಯನ್ನು ಜೂ.29 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಅಧಿಕ ರಕ್ತದೊತ್ತಡ, ಹೈಪೋಥೈರಾಯ್ಡಿಸಂನಿಂದ ಬಳಲುತ್ತಿದ್ದರು’ ಎಂದು ಶ್ರೀನಗರದಲ್ಲಿರುವ ಹೃದಯರೋಗ ಸಂಬಂಧಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಸಲೀಮ್ ತಕ್ ಅವರು ಹೇಳಿದರು.

ಜು. 1 ರಂದು ಆಸ್ಪತ್ರೆಗೆ ದಾಖಲಾದ ಶ್ರೀನಗರದ ಮಹಿಳೆಯೂ ರಕ್ತದೊತ್ತಡ, ನ್ಯುಮೋನಿಯಾ ಮತ್ತು ಟಿ2ಡಿಎಂನಿಂದ ಬಳಲುತ್ತಿದ್ದರು ಎಂದು ಎಸ್‌ಎಂಎಚ್‌ಎಸ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ನಸೀರ್ ಅಹಮದ್ ಚೌಧರಿ ಅವರು ಮಾಹಿತಿ ನೀಡಿದರು.

ಕಳೆದ 20 ದಿನಗಳಲ್ಲಿ ಜಮ್ಮು–ಕಾಶ್ಮೀರದಲ್ಲಿ 3400ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದ್ದು, ಈವರೆಗೆ ಒಟ್ಟು 9261 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.