ಶನಿವಾರ, ಜುಲೈ 31, 2021
25 °C
#VikasDubeyEncounter

'ಪೊಲೀಸರು ವಿಕಾಸ್‌ ದುಬೆ ಕೊಲ್ಲಬಹುದು': ಸಾವಿಗೆ ಮೊದಲು 'ಸುಪ್ರೀಂ'ಗೆ ಅರ್ಜಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕಾನ್ಪುರದಲ್ಲಿ ಪೊಲೀಸ್‌ ಎನ್‌ಕೌಂಟರ್‌ನಿಂದ ಹತನಾದ ರೌಡಿ ವಿಕಾಸ್ ದುಬೆ ಜೀವಕ್ಕೆ ಪೊಲೀಸರಿಂದ ಅಪಾಯವಿದೆ ಎಂಬ ಅರ್ಜಿಯೊಂದು ದುಬೆ ಸಾವಿಗೆ ಕೆಲ ಗಂಟೆಗಳ ಮೊದಲು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿತ್ತು.

ಈ ವಿಚಾರವನ್ನು ನ್ಯಾಯಾಲಯ ಕಲಾಪಗಳಿಗೆ ಸಂಬಂಧಿಸಿದ ಮಾಹಿತಿ ಒದಗಿಸುವ ಜಾಲತಾಣ 'ಬಾರ್‌ ಅಂಡ್ ಬೆಂಚ್' ಬಹಿರಂಗಪಡಿಸಿದೆ.

ಇದನ್ನೂ ಓದಿ: 

'ಉತ್ತರ ಪ್ರದೇಶ ಪೊಲೀಸರು ವಿಕಾಸ್ ದುಬೆಯನ್ನು ಕೊಲ್ಲಬಹುದು. ದುಬೆಯ ಎಲ್ಲ ಸಹಚರರನ್ನು ಎನ್‌ಕೌಂಟರ್‌ಗಳಲ್ಲಿ ಕೊಲ್ಲಲಾಗಿದೆ' ಎಂದು ಅರ್ಜಿ ಉಲ್ಲೇಖಿಸಿತ್ತು.

'ಅರ್ಜಿಯನ್ನು ಶೀಘ್ರ ವಿಚಾರಣೆಗೆ ಕೈಗೆತ್ತಿಕೊಳ್ಳದಿದ್ದರೆ ಏನೂ ಪ್ರಯೋಜನವಾಗುವುದಿಲ್ಲ. ದುಬೆ ಸಹಚರರ ಎನ್‌ಕೌಂಟರ್ ಬಗ್ಗೆ ಸಿಬಿಐ ನಿಗಾವಣೆಯಲ್ಲಿ ತನಿಖೆ ನಡೆಯಬೇಕಿದೆ' ಎಂದು ಅರ್ಜಿ ಮನವಿ ಮಾಡಿತ್ತು.

ಇನ್ನಷ್ಟು...

8 ಮಂದಿ ಪೊಲೀಸರ ಹತ್ಯೆ ಮಾಡಿದ ಆರೋಪ: ರೌಡಿಶೀಟರ್‌ ವಿಕಾಸ್‌ ದುಬೆ ಬಂಧನ

ವಿಕಾಸ್ ದುಬೆ ಪರಾರಿಯಾಗಲು ದಾಳಿಯ ಮಾಹಿತಿ ಮೊದಲೇ ನೀಡಿದ ಇಬ್ಬರು ಪೊಲೀಸರ ಬಂಧನ 

ಉತ್ತರ ಪ್ರದೇಶ: 8ಪೊಲೀಸರನ್ನು ಹತ್ಯೆಗೈದ ವಿಕಾಸ್ ದುಬೆ ಬಂಧಿಸಲು 25 ವಿಶೇಷ ತಂಡ 

ಫರೀದಾಬಾದ್‌ನಲ್ಲಿ ಕಾಣಿಸಿದ ವಿಕಾಸ್ ದುಬೆ: ಪೊಲೀಸರು ಬರುವ ಮೊದಲೇ ಪರಾರಿ 

ಕಾನ್ಪುರ: ದುಬೆ ಸಹಚರನ ಹತ್ಯೆ, ಆರು ಜನರ ಬಂಧನ 

ಕಾನ್ಪುರ 8 ಪೊಲೀಸರ ಹತ್ಯೆ ಪ್ರಕರಣ: ವಿಕಾಸ್ ದುಬೆ ಸಹಚರ ಅಮರ್ ದುಬೆ ಎನ್‌ಕೌಂಟರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು