ಬುಧವಾರ, ಸೆಪ್ಟೆಂಬರ್ 22, 2021
25 °C

ಪುಣೆಯಿಂದ ವಿಶೇಷ ವಿಮಾನದಲ್ಲಿ ಸ್ವದೇಶಕ್ಕೆ ತೆರಳಿದ 125 ಮಂದಿ ಬಹರೇನ್ ಪ್ರಜೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ(ಮಹಾರಾಷ್ಟ್ರ): ಲಾಕ್ ಡೌನ್ ಜಾರಿಯಾಗಿರುವ ಕಾರಣ ಪುಣೆಯಲ್ಲಿ ಸಿಲುಕಿಕೊಂಡಿದ್ದ 125 ಮಂದಿ ಬಹರೇನ್ ಪ್ರಜೆಗಳು ಶನಿವಾರ ವಿಶೇಷ ವಿಮಾನದಲ್ಲಿ ತವರಿಗೆ ಮರಳಿದ್ದಾರೆ.

ಮಾರ್ಚ್ 24ರಿಂದ ಪುಣೆಯಲ್ಲಿಯೇ ಸಿಲುಕಿಕೊಂಡಿದ್ದ ಬಹರೇನ್ ಪ್ರಜೆಗಳನ್ನು ಅವರ ತವರಿಗೆ ಕಳುಹಿಸುವುದಕ್ಕಾಗಿಯೇ ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿತ್ತು. 

ಭಾರತದಲ್ಲಿ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದು ಪಡಿಸಲಾಗಿದೆ. ಆದರೂ ಬಹರೇನ್ ಪ್ರಜೆಗಳಿಗಾಗಿ ವಿಶೇಷ ವಿಮಾನವನ್ನು ವ್ಯವಸ್ಥೆ ಮಾಡಿದ್ದು ಶನಿವಾರ ಪುಣೆಯಿಂದ ತಮ್ಮ ಲಗ್ಗೇಜುಗಳೊಂದಿಗೆ ಸ್ವದೇಶಕ್ಕೆ ತೆರಳಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು