ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ತರಬೇತಿ ವಿಮಾನ ಅಪಘಾತ: 15 ಮಂದಿ ಸಾವು

Last Updated 30 ಜುಲೈ 2019, 4:06 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾತರಬೇತಿ ವಿಮಾನ ಮಂಗಳವಾರ ರಾವಲ್ಪಿಂಡಿ ಬಳಿಅಪಘಾತಕ್ಕೀಡಾಗಿದ್ದು,5 ಸಿಬ್ಬಂದಿ ಸೇರಿ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ.

ಇಸ್ಲಾಮಾಬಾದ್‌ ರಾಜಧಾನಿ ರಾವಲ್ಪಿಂಡಿಯಲ್ಲಿನ ಪಾಕಿಸ್ತಾನದ ಸೇನಾ ನೆಲಯ ಪ್ರಧಾನ ಕಚೇರಿ ಬಳಿ ಈ ಅಪಘಾತ ನಡೆದಿದೆ. ವಿಮಾನ ಜನವಸತಿ ಪ್ರದೇಶದ ಬಳಿ ನೆಲಕ್ಕೆ ಅಪ್ಪಳಿಸಿದ್ದರಿಂದ ಅಲ್ಲಿದ್ದ ಮನೆಗಳಿಗೆಬೆಂಕಿ ಹೊತ್ತಿಕೊಂಡಿದೆ.

ಪ್ರತಿದಿನದಂತೆ ತರಬೇತಿ ನಡೆಸುತ್ತಿದ್ದಾಗ ವಿಮಾನ ದುರಂತಕ್ಕೀಡಾಗಿದೆ. ಯಾವ ಕಾರಣಕ್ಕೆ ಈ ಅಪಘಾತ ಸಂಭವಿಸಿದೆ ಎನ್ನುವ ಬಗ್ಗೆ ಇನ್ನು ತಿಳಿದು ಬಂದಿಲ್ಲ.ಲೆ.ಕ. ಸಕೀಬ್‌, ಲೆ.ಕ.ವಾಸಿಮ್, ನಾಯಬ್ ಸುಬೇದಾರ್‌ ಅಫ್ಜಲ್, ಹವಾಲ್ದಾರ್‌ ಅಮಿನ್, ಹವಾಲ್ದಾರ್‌ ರಹಮತ್‌ ಮೃತಪಟ್ಟ ಸಿಬ್ಬಂದಿ.

ಲೆ.ಜನರಲ್‌ ಬಿಲಾಲ್‌ ಅಕ್ಬರ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ‘ಜನವಸತಿ ಪ್ರದೇಶದಲ್ಲಿ ಲಘು ವಿಮಾನ ದುರಂತಕ್ಕೀಡಾಗಿದೆ. ಸದ್ಯ 15 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ 12 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿದಿದೆ’ ಎಂದು ಅಕ್ಬರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT