ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ: ಕುಟುಂಬ ಕಳೆದುಕೊಂಡ 200ಕ್ಕೂ ಹೆಚ್ಚು ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ: ಶ್ರೀಲಂಕಾದ ಸರಣಿ ಬಾಂಬ್ ಸ್ಫೋಟದಲ್ಲಿ ಸುಮಾರು 200ಕ್ಕೂ ಹೆಚ್ಚು ಮಕ್ಕಳು ಕುಟುಂಬ ಕಳೆದುಕೊಂಡಿದ್ದು, ಇದರಲ್ಲಿ ಕೆಲವರು ಇಡೀ ಕುಟುಂಬ ನಿರ್ವಹಣೆ ಹೊತ್ತುಕೊಂಡಿದ್ದಾರೆ ಎಂದು ಕೊಲಂಬೊ ಮೂಲದ ಶ್ರೀಲಂಕಾದ ರೆಡ್‌ಕ್ರಾಸ್ ಸಂಸ್ಥೆ ಹೇಳಿದೆ.

ಇನ್ನು ಹಲವು ಕುಟುಂಬ ಆದಾಯದ ಮೂಲಗಳನ್ನೇ ಕಳೆದುಕೊಂಡಿದ್ದು, ಜೀವನ ನಡೆಸುವುದು ದುಸ್ತರವಾಗಿದೆ ಎಂದು ಮಾಹಿತಿ ನೀಡಿದೆ.

ಜೊತೆಗೆ ಇದರಲ್ಲಿ 500ಕ್ಕೂ ಹೆಚ್ಚು ಗಾಯಗೊಂಡಿದ್ದು, ಇದರಲ್ಲಿ 75 ಕುಟುಂಬಗಳ ಜನರ ಜೀವನೋಪಾಯಕ್ಕೆ ಹೊಡೆತ ಬಿದ್ದಿದೆ. ಇದರಲ್ಲಿ ಕೆಲವರಿಗೆ ಕೆಲಸಕ್ಕೆ ಹೋಗದ ಸ್ಥಿತಿ ಎದುರಾದರೆ, ಹಲವರು ತಮ್ಮ ದೈಹಿಕ ಸಾಮರ್ಥ್ಯ ಕಳೆದುಕೊಂಡು ಯಾತನೆ ಅನಭವಿಸುತ್ತಿದ್ದಾರೆ ಎಂದಿದೆ.

ದಾಳಿಗೆ ತುತ್ತಾಗಿ ಕುಟುಂಬಸ್ಥರನ್ನು ಕಳೆದುಕೊಂಡು ಬದುಕುತ್ತಿರುವ ಮಂದಿಗೆ ಮಾನಸಿಕ ಪ್ರಾಥಮಿಕ ಚಿಕಿತ್ಸೆ ನೀಡಬೇಕು. ಈ ಭಯಾನಕ ದಾಳಿಗೆ ತುತ್ತಾಗಿ ಯಾತನೆ ಅನುಭವಿಸುತ್ತಿರುವವರ ಮಾನಸಿಕ ಸ್ಥಿಮಿತತೆ ಸರಿಪಡಿಸುವುದು ನಮ್ಮ ಗುರಿ ಎಂದು ವರದಿಯಲ್ಲಿ ಹೇಳಿದೆ. 

9 ಮಂದಿ ಆತ್ಮಾಹುತಿ ದಾಳಿಕೋರರು ಈಸ್ಟರ್‌ ಡೇ ಯಂದು ನಡೆಸಿದ ಸರಣಿ ಸ್ಫೋಟದಲ್ಲಿ 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು