ಭಾನುವಾರ, ಜನವರಿ 17, 2021
20 °C

ಹಾಲಿವುಡ್‌ ನಟಿಯಂತೆ ಕಾಣಲು ಪ್ಲಾಸ್ಟಿಕ್‌ ಸರ್ಜರಿಗೆ ಒಳಗಾದಾಕೆಗೆ ಜೈಲಲ್ಲಿ ಸೋಂಕು

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

ತನ್ನ ಮೆಚ್ಚಿನ ನಟಿ ಏಂಜಲಿನಾ ಜೋಲಿಯಂತೆ ಕಾಣಿಸಿಕೊಳ್ಳಬೇಕೆಂದು 50 ಬಾರಿ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ ಇರಾನ್‌ನ ಇನ್‌ಸ್ಟಾಗ್ರಾಂ ತಾರೆ ಸಹರ್‌ ತಾಬರ್‌ ಸದ್ಯ ಜೈಲಿನಲ್ಲಿ ಕೋವಿಡ್‌ ಸೋಂಕು ತಗುಲಿ, ಕೃತಕ ಉಸಿರಾಟದಲ್ಲಿ ಜೀವಿಸುತ್ತಿದ್ದಾರೆ.

ಇದನ್ನೂ ಓದಿ: ಏಂಜಲಿನಾ ಜೋಲಿ ಸಿಂಡ್ರೋಮ್‌ ನಿಮಗೂ ಇದೆಯೇ?

ಜೈಲಿನಲ್ಲಿ ಕೊರೊನಾ ವೈರಸ್ ಪೀಡಿತರೊಂದಿಗೆ ಸಂಪರ್ಕಕ್ಕೆ ಬಂದ ಬಳಿಕ ತಾಬರ್‌ ಅವರಿಗೂ ಸೋಂಕು ಉಂಟಾಗಿದೆ. ಸದ್ಯ ಆಕೆ ತೆಹ್ರಾನ್‌ನ ಸಿನಾ ಆಸ್ಪತ್ರೆಯ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಧರ್ಮನಿಂದೆಯ ಪೋಸ್ಟ್‌ ಹಾಕಿದ ಆರೋಪದ ಮೇಲೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಬಾರ್‌ನನ್ನು ಇರಾನ್‌ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ದೇಶದಲ್ಲಿ ಕೊರೊನಾ ವೈರಸ್‌ ಹರಡುತ್ತಿದ್ದರೂ ನ್ಯಾಯಾಲಯ ಆಕೆಗೆ ಜಾಮೀನು ನೀಡಲು ನಿರಾಕರಿಸಿತ್ತು ಎಂದು ಇರಾನ್‌ನ ಮಾನವ ಹಕ್ಕುಗಳ ಕೇಂದ್ರ ಇತ್ತೀಚೆಗೆ ಹೇಳಿತ್ತು. 

ಹಾಲಿವುಡ್‌ ನಟಿ ಏಂಜಲಿನಾ ಜೋಲಿಯ ಬಹುದೊಡ್ಡ ಅಭಿಮಾನಿ. ತಾನು ಆಕೆಯಂತೆಯೇ ಕಾಣಬೇಕೆಂದು ಬರೋಬರಿ 50 ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡು, ಮೈ ತೂಕ ಇಳಿಸಿಕೊಂಡಿದ್ದರು. ಆಕೆ ಏಂಜಲಿನಾ ರೀತಿ ಪರಿವರ್ತನೆಗೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಜಗತ್ತಿನಾದ್ಯಂತ ಸುದ್ದಿಯಾಗಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು