ಶುಕ್ರವಾರ, ಜನವರಿ 24, 2020
17 °C

ಕಡಲ್ಗಳ್ಳರ ಒತ್ತೆಯಲ್ಲಿದ್ದ 18 ಭಾರತೀಯರ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನೈಜೀರಿಯಾ ಕರಾವಳಿಯಲ್ಲಿ ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ ಹದಿನೆಂಟು ಮಂದಿ ಭಾರತೀಯರು ಬಿಡುಗಡೆಗೊಂಡಿದ್ದಾರೆ ಎಂದು ನೈಜೀರಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಹಾಂಗ್‌ಕಾಂಗ್‌ನ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರನ್ನು ಡಿಸೆಂಬರ್‌ 3ರಂದು ಬೋನಿ ದ್ವೀಪದ ಬಳಿಯಿಂದ ಕಡಲ್ಗಳ್ಳರು ಅಪಹರಿಸಿದ್ದರು. ಭಾರತೀಯರು ಬಿಡುಗಡೆಗೊಂಡಿರುವುದನ್ನು ನೈಜೀರಿಯಾದ ನೌಕಾಪಡೆ ದೃಢಪಡಿಸಿದೆ. ಅವರಿಗೆ ಧನ್ಯವಾದಗಳು ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್‌ ಮಾಡಿದೆ. 18 ಮಂದಿ ಭಾರತೀಯರು ಸೇರಿದಂತೆ 19 ಮಂದಿಯನ್ನು ಕಡಲ್ಗಳ್ಳರು ಅಪಹರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು