ಗುರುವಾರ , ಡಿಸೆಂಬರ್ 3, 2020
20 °C
ಘಟನೆಯಲ್ಲಿ 15ಕ್ಕೂ ಅಧಿಕ ಜನರಿಗೆ ಗಂಭೀರ ಗಾಯ

ಅಫ್ಗಾನಿಸ್ತಾನ: ಬಾಂಬ್‌ ಸ್ಫೋಟಕ್ಕೆ 34 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌: ಪಶ್ಚಿಮ ಅಫ್ಗಾನಿಸ್ತಾನದಲ್ಲಿ ರಸ್ತೆಬದಿಯಲ್ಲಿ ದುಷ್ಕರ್ಮಿಗಳು ಇರಿಸಿದ್ದ ಬಾಂಬ್‌ ಸ್ಫೋಟಗೊಂಡು, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 34 ಪ್ರಯಾಣಿಕರು ಮೃತಪಟ್ಟಿದ್ದಾರೆ. ಈ ಪೈಕಿ ಮಕ್ಕಳು ಹಾಗೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

‘ಈ ಬಸ್‌ ಹೆರಾತ್‌ನಿಂದ ಕಂದಹಾರ್‌ಗೆ ಹೆದ್ದಾರಿಯಲ್ಲಿ ಸಂಚರಿಸುತ್ತಿತ್ತು. ಘಟನೆಯಲ್ಲಿ 17ಕ್ಕೂ ಅಧಿಕ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಇವರ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಫರಾ ಪ್ರಾಂತದ ಪೊಲೀಸ್‌ ಮುಖ್ಯಸ್ಥರ ವಕ್ತಾರ ಮೊಹಿಬುಲ್ಲ ಮೊಹೀಬ್‌ ಮಾಹಿತಿ ನೀಡಿದ್ದಾರೆ.  

ದಾಳಿಯ ಹೊಣೆಯನ್ನು ಇಲ್ಲಿಯವರೆಗೂ ಯಾರೂ ಹೊತ್ತಿಲ್ಲವಾದರೂ, ಈ ಪ್ರದೇಶದಲ್ಲಿ ತಾಲಿಬಾನ್‌ ದಂಗೆಕೋರರು ಸರ್ಕಾರಿ ಅಧಿಕಾರಿಗಳು ಹಾಗೂ ಭದ್ರತಾ ಪಡೆಗಳನ್ನು ಗುರಿಯಾಗಿರಿಸಿಕೊಂಡು ಈ ರೀತಿ ರಸ್ತೆಬದಿಯಲ್ಲಿ ಬಾಂಬ್‌ ಸ್ಪೋಟಿಸುವ ಘಟನೆಗಳು ನಡೆದಿವೆ. 18 ವರ್ಷಗಳ ಯುದ್ಧಕ್ಕೆ ಅಂತ್ಯ ಹಾಡಲು ಅಮೆರಿಕ ಜತೆ ಶಾಂತಿ ಮಾತುಕತೆ ನಡೆಸುತ್ತಿರುವ ತಾಲಿಬಾನ್‌, ಆಗಾಗೆ ಇಂತಹ ದಾಳಿ ಮುಂದುವರಿಸಿದೆ.

717 ನಾಗರಿಕರು ಮೃತ: ತಾಲಿಬಾನ್‌ ವಿರುದ್ಧ ಅಫ್ಗಾನ್‌ ಭದ್ರತಾ ಪಡೆ ಮತ್ತು ಅಮರಿಕ ಸೇನಾಪಡೆ ಕಾರ್ಯಾಚರಣೆ ನಡೆಸಿದ ವೇಳೆ ಮೃತಪಟ್ಟ ನಾಗರಿಕರ ಸಂಖ್ಯೆಯ ವರದಿಯನ್ನು ಮಂಗಳವಾರವಷ್ಟೇ ವಿಶ್ವಸಂಸ್ಥೆ ಬಿಡುಗಡೆಗೊಳಿಸಿತ್ತು.

ವರದಿ ಪ್ರಕಾರ ವರ್ಷದ ಮೊದಲಾರ್ಧದಲ್ಲಿ ಆಫ್ಗನ್‌ ಭದ್ರತಾ ಪಡೆ ಕಾರ್ಯಾಚರಣೆ ವೇಳೆ 403 ನಾಗರಿಕರು ಮೃತಪಟ್ಟಿದ್ದರೆ, ಅಮೆರಿಕ ಸೇನಾ ಕಾರ್ಯಾಚರಣೆ ವೇಳೆ 314 ಜನ ಮೃತಪಟ್ಟಿದ್ದರು. ತಾಲಿಬಾನ್‌ ಸೇರಿದಂತೆ ಉಳಿದ ಉಗ್ರರ ದಾಳಿಗೆ 531 ಜನ ಮೃತಪಟ್ಟಿದ್ದಾರೆ. ಈ ಪೈಕಿ 300 ಜನರನ್ನು ಗುರಿಯಾಗಿರಿಸಿಕೊಂಡೇ ದಾಳಿ ನಡೆಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು