ಭಾನುವಾರ, ಫೆಬ್ರವರಿ 23, 2020
19 °C

ಬ್ರಿಟನ್‌: ಸಂಪುಟಕ್ಕೆ ಶರ್ಮಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಲಂಡನ್‌: ಬ್ರಿಟನ್‌ ಸಚಿವ ಸಂಪುಟಕ್ಕೆ ಭಾರತ ಸಂಜಾತ ಸಂಸದ ಅಲೋಕ್‌ ಶರ್ಮಾ ಅವರನ್ನು ಸಹ ಸೇರಿಸಿಕೊಳ್ಳಲಾಗಿದೆ.

ಶರ್ಮಾ ಅವರಿಗೆ ವ್ಯಾಪಾರ, ಉದ್ಯಮ ಮತ್ತು ಇಂಧನದ ಖಾತೆಯ ಜವಾಬ್ದಾರಿ ನೀಡಲಾಗಿದೆ. ಅಗ್ರಾದಲ್ಲಿ ಜನಿಸಿರುವ 52 ವರ್ಷದ ಶರ್ಮಾ, ಈ ಮೊದಲು ಅಂತರರಾಷ್ಟ್ರೀಯ ಅಭಿವೃದ್ಧಿಯ ಕಾರ್ಯದರ್ಶಿಯಾಗಿದ್ದರು.

ಗೋವಾ ಮೂಲದ ಸಂಸದ ಸ್ಯು ಎಲ್ಲೆನ್‌ ಬ್ರವೆರ್ಮಾನ್‌ (39) ಅವರನ್ನು ಸಹ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

ಬ್ರಿಟನ್‌ ಸರ್ಕಾರದಲ್ಲಿ ಗೃಹ ಕಾರ್ಯದರ್ಶಿಯಾಗಿ ಭಾರತ ಸಂಜಾತೆ ಪ್ರೀತಿ ಪಟೇಲ್‌ ಕಾರ್ಯನಿರ್ವಹಿಸುತ್ತಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)