ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಅಮೆರಿಕದ ಹಿರಿಯ ನಾಗರಿಕರಲ್ಲಿ ಚೈತನ್ಯ ತುಂಬುತ್ತಿರುವ ಬಾಲಕಿ ಹಿತಾ

Last Updated 25 ಏಪ್ರಿಲ್ 2020, 4:26 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕೋವಿಡ್‌–19ರಿಂದ ನರ್ಸಿಂಗ್‌ ಹೋಂಗಳಲ್ಲಿ ಏಕಾಂತವಾಸ ಅನುಭವಿಸುತ್ತಿರುವ ಮಕ್ಕಳು ಹಾಗೂ ವಯೋವೃದ್ಧರಿಗಾಗಿ ಬಣ್ಣದ ಬಣ್ಣದ ಉಡುಗೊರೆ ಕಳುಹಿಸುವ ಮೂಲಕ ಭಾರತೀಯ ಮೂಲದ ಹದಿನೈದರ ಪೋರಿ ಚೈತನ್ಯ ತುಂಬುವ ಕೆಲಸ ಮಾಡುತ್ತಿದ್ದಾಳೆ.

ಪೆನ್ಸಿಲ್ವೆನಿಯಾದ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿರುವ ಹಿತಾ ಗುಪ್ತಾ ‘ಬ್ರೈಟನ್‌ ಎ ಡೇ’ ಎನ್ನುವ ಸ್ವಯಂಸೇವಾ ಸಂಸ್ಥೆಯನ್ನು ಹೊಂದಿದ್ದಾಳೆ. ಇದರ ಮೂಲಕ ಅಮೆರಿಕದ ನರ್ಸಿಂಗ್‌ ಹೋಂನಲ್ಲಿರುವರಿಗಾಗಿ ‍‍ಪ್ರೀತಿ, ಸ್ನೇಹ, ಆಶಾಕಿರಣವನ್ನು ಬಿಂಬಿಸುವ ಉಡುಗೊರೆ ಕಳುಹಿಸುತ್ತಿದ್ದಾಳೆ.

ಪದಬಂಧ, ಬಣ್ಣತುಂಬುವ ಪುಸ್ತಕ, ಬಣ್ಣದ ಪೆನ್ಸಿಲುಗಳಿರುವ ತನ್ನದೇ ಕೈಬರಹದ ಪುಟಾಣಿ ಉಡುಗೊರೆಗಳನ್ನು ಕಳುಹಿಸಿ, ಕೋವಿಡ್‌ 19 ನಿರ್ಬಂಧದಲ್ಲಿಯೂ ವೃದ್ಧರು ಮತ್ತು ಮಕ್ಕಳಲ್ಲಿ ನಾಳೆಯ ಬಗ್ಗೆ ಭರವಸೆ ತುಂಬುತ್ತಿದ್ದಾಳೆ.

‘ತಮ್ಮ ಪ್ರೀತಿ ಪಾತ್ರರಿಂದ ದೂರವಿದ್ದುಕೊಂಡು ನರ್ಸಿಂಗ್‌ ಹೋಂಗಳಲ್ಲಿ ಜೀವನ ನಡೆಸುವುದು ಬಹಳ ಕಷ್ಟ. ಹಿರಿಯನಾಗರಿಕರು ಎಲ್ಲರಿಂದಲೂ ದೂರವಿರಬೇಕಾದ ಸಂದರ್ಭವೊಂದು ಬಂದಿದೆ. ಸಂಶೋಧನೆಯ ಪ್ರಕಾರ ಶೇ 40ರಷ್ಟು ಮಂದಿ ಹಿರಿಯ ನಾಗರಿಕರು ಏಕಾಂಗಿಯ ನೋವನ್ನು ಅನುಭವಿಸುತ್ತಾರೆ. ಹಾಗಾಗಿ ಈ ಚಿಕ್ಕಪ್ರಯತ್ನ. ಇದರಲ್ಲಿ ನನ್ನ ಒಂಬತ್ತು ವರ್ಷದ ದಿವಿತ್‌ ಗುಪ್ತಾನೂ ಜತೆಯಾಗಿದ್ದಾನೆ’ ಎಂದು ಹೇಳುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT