ಸೋಮವಾರ, ಅಕ್ಟೋಬರ್ 26, 2020
26 °C

ಅಮೆರಿಕ: ಭಾರತೀಯ ಸಂಜಾತ ಟೆಕ್ಕಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕದಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌ ಕಂಪನಿ (ಅತ್ರೆನೆಟ್‌ ಇಂಕ್‌) ಮಾಲೀಕ ಭಾರತೀಯ ಸಂಜಾತ ತುಷಾರ್‌ ಅತ್ರೆ (50) ಅವರು ಅಪಹರಣಗೊಂಡ ಕೆಲವೇ ಗಂಟೆಗಳಲ್ಲಿ, ಅವರ ಗೆಳತಿಯ ಕಾರಿನ ಸಮೀಪವೇ ಶವವಾಗಿ ಪತ್ತೆಯಾಗಿದ್ದಾರೆ.

ಕೋಟ್ಯಧಿಪತಿ, ಟೆಕಿ ತುಷಾರ್‌ ಅವರು ಕ್ಯಾಲಿಫೋರ್ನಿಯಾದ ತಮ್ಮ ಮನೆಯಲ್ಲಿ ಮಂಗಳವಾರ ಇದ್ದಾಗ, ನುಗ್ಗಿದ ದುಷ್ಕರ್ಮಿಗಳು ಅವರ ಗೆಳತಿಯ ಕಾರಿನಲ್ಲಿ ತುಷಾರ್‌ ಅವರನ್ನು ಅಪಹರಿಸಿದ್ದರು ಎಂದು ‘ಲಾಸ್‌ ಏಂಜಲೀಸ್‌ ಟೈಮ್ಸ್‌’ ವರದಿ ಮಾಡಿದೆ. ಕಳವಾಗಿದ್ದ ಕಾರು ಪತ್ತೆಯಾಗಿದ್ದು, ಸಮೀಪದಲ್ಲೇ ತುಷಾರ್‌ ಅವರ ಶವವೂ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು